ಪೋಷಕರೇ ಎಚ್ಚರ..ನೀವು ಅಪ್ರಾಪ್ತರಿಗೆ ವಾಹನ ಕೊಡುತ್ತೀರಾ.. ಅಪ್ಪಿ ತಪ್ಪಿ ಕೊಟ್ಟರೆ ಭಾರಿ ದಂಡ ಬೀಳಲಿದೆ. ಅಲ್ಲದೇ ಜೈಲು ಶಿಕ್ಷೆ ಅನುಭವಿಸಬೇಕಾದೀತು..ಜೋಕೆ..!
ಹೌದು. ಬೆಂಗಳೂರಿನ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ, ಹಾಗೂ 14 ಪ್ರಕರಣ ದಾಖಲಿಸಿದ್ದಾರೆ.
ಅಪ್ರಾಪ್ತ ಯುವಕರು ದೆವ್ವದ ಮುಖವಾಡ ಧರಿಸಿ ವ್ಹೀಲಿಂಗ್ ಮಾಡುತ್ತಿದ್ದರು. ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಈ ಮೂವರು ರಸ್ತೆಗಳಲ್ಲಿ ದೆವ್ವಗಳ ಮುಖವಾಡ ಧರಿಸಿ ರಸ್ತೆಗಳಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ನಂತರ ಪೊಲೀಸರು ಮೂವರನ್ನು ಬಂಧಿಸಿ ಬೈಕ್ ಸೀಜ್ ಮಾಡಿ ಪೋಷಕರಿಗೆ 25 ಸಾವಿರ ದಂಡ ವಿಧಿಸಿದ್ದಾರೆ. ವೀಲ್ಹಿಂಗ್ ಮಾಡುವಾಗ ದೆವ್ವದ ಮುಖವಾಡ ಧರಿಸುತ್ತಿದ್ದ ಇವರು ʼಡೆವಿಲ್ಸ್ ಆನ್ ರೋಡ್ʼ ಎಂದು ತಮ್ಮನ್ನ ತಾವು ಕರೆದುಕೊಳ್ಳುತ್ತಿದ್ದರು. ಪೋಷಕರು ತಮ್ಮ ಮಕ್ಕಳಿಗೆ ವಾಹನ ಕೊಡುವಾಗ ಬಹಳ ಎಚ್ಚರಿಕೆಯಿಂದಿರಬೇಕು.
https://twitter.com/kmpalyatrfps/status/1724090427509494257?ref_src=twsrc%5Etfw%7Ctwcamp%5Etweetembed%7Ctwterm%5E1724090427509494257%7Ctwgr%5Eddb85dc4762263143fc8dc399ff58a50580a04cf%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-dh71ad7b0a01d347d2a0a68e5f262fdb7d%2Fposhakaregamanisiapraaptamakkaligevaahananiduvamunnaeesuddiodi-newsid-n556899472