ತಮಿಳುನಾಡು : ಮನೆ ಬಳಿಯಿದ್ದ ನೀರಿನ ಸಂಪ್’ ಗೆ ಬಿದ್ದು 2 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ತಮಿಳುನಾಡು ಜಿಲ್ಲೆಯ ಅಣ್ಣೂರು ಬಳಿ ನಡೆದಿದೆ.
ಚಿರಂಜೀವಿ ವಿಕ್ರಮ್ (2) ಎಂಬ ಬಾಲಕ ಮೃತಪಟ್ಟಿದ್ದು, ಮನೆ ಮುಂದೆ ಆಟವಾಡುವಾಗ ಆಯತಪ್ಪಿ ಅಲ್ಲೇ ಪಕ್ಕದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದಿದ್ದಾನೆ.
ಸಂಜೆ ಕೆಲಸ ಮುಗಿಸಿ ಬಂದ ಪೋಷಕರಿಗೆ ವಿಕ್ರಮ್ ನಾಪತ್ತೆಯಾಗಿರುವ ವಿಚಾರ ಮಗಳು ತಿಳಿಸಿದ್ದಾಳೆ. ಎಲ್ಲಾಕಡೆ ಹುಡುಕಿದರು ಮಗ ಪತ್ತೆಯಾಗಲಿಲ್ಲ. ನಂತರ ಮನೆ ಬಳಿ ಇರುವ ಟ್ಯಾಂಕ್ ನೋಡಿದಾಗ ವಿಕ್ರಮ್ ಶವ ತೇಲುತಿತ್ತು. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.