ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರದ ಬೆನ್ನಲ್ಲೇ ಕೈದಿಗಳು ಎಣ್ಣೆ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ್ದ ವಿಡಿಯೋ ವೈರಲ್ ಆಗಿತ್ತು. ಈ ಪ್ರಕರಣದ ಗ್ಯಾಂಗ್ ನ್ನು ಪೊಲೀಸರು ಪತ್ತೆ ಮಾಡಿದ್ದು, ನಾಲ್ವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಕಾರ್ತಿಕ್ @ ಚಿಟ್ಟೆ, ಧನಂಜಯ್, ಮಂಜುನಾಥ್ @ ಕೋಳಿ ಮಂಜ ಹಾಗೂ ಚರಣ್ ರಾವ್ ಎಂಬ ನಾಲ್ವರು ಕೈದಿಗಳು ಈ ಕೃತ್ಯವೆಸಗಿದ್ದಾರೆ. ನಾಲ್ವರ ವಿರುದ್ಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಪರಪ್ಪನ ಅಗ್ರಹಾರದಲ್ಲಿ ಎಣ್ಣೆ ಪಾರ್ಟಿ ಮಾಡಿದ್ದ ಬಾಟಲ್ ಇನ್ನಿತರ ವಸ್ತುಗಳನ್ನು ಪೊಲೀಸರು ಎಫ್ ಎಸ್ ಎಲ್ ಗೆ ರವಾನಿಸಿದ್ದಾರೆ. ಜೈಲಿನ ಬ್ಯಾರಕ್ 8 ರ ರೂಮ್ ನಂ.7ರಲ್ಲಿ ನಿಷೇಧಿತ ವಸ್ತುಗಳನ್ನು ಇಟ್ಟುಕೊಂಡು ಡಾನ್ಸ್ ಮಾಡಲಾಗಿದೆ ಮೊಬೈಲ್ ನಲ್ಲಿ ಕೈದಿಗಳ ಡಾನ್ಸ್ ವಿಡಿಯೋ ಚಿತ್ರೀಕರಿಸಲಾಗಿದ್ದು, ಇದೆಲ್ಲದರ ಬಗ್ಗೆಯೂ ತನಿಖೆ ನಡೆಸಲು ನಾಲ್ವರು ಕೈದಿಗಳ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ.
