BREAKING: ಕೆ.ಹೆಚ್.ಮುನಿಯಪ್ಪ ಸಿಎಂ ಆದರೆ ಸ್ವಾಗತ ಮಾಡುತ್ತೇನೆ: ಕುತೂಹಲ ಮೂಡಿಸಿದ ಗೃಹ ಸಚಿವ ಪರಮೇಶ್ವರ್ ಹೇಳಿಕೆ!

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಭಾರಿ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಗೃಹ ಸಚಿವ ಪರಮೇಶ್ವರ್, ಮುನಿಯಪ್ಪ ಸಿಎಂ ಆದರೆ ಸ್ವಾಗತ ಎಂದು ಹೇಳುವಮೂಲಕ ಕುತೂಹಲ ಮೂಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಸಚಿವ ಕೆ.ಹೆಚ್.ಮುನಿಯಪ್ಪ ಸಿಎಂ ಆದರೆ ಸ್ವಾಗತ ಮಾಡುತ್ತೇನೆ. ಅವರು ಏಳು ಬಾರಿ ಎಂಪಿ ಆದವರು. ಎಂಪಿ ಆಗುವುದೆಂದರೆ ಸಾಮಾನ್ಯವಲ್ಲ, ಹೀಗಿರುವಾಗ ಏಳು ಬಾರಿ ಎಂಪಿ ಆಗಿ ಆಯ್ಕೆಯಾದವರು. ಅವರು ಕಾಂಗ್ರೆಸ್ ನ ಹಿರಿಯ ನಾಯಕರು, ಸಮರ್ಥರು ಹಾಗೂ ಅರ್ಹರಿದ್ದಾರೆ. ಹಾಗಾಗಿ ಅವರು ಮುಖ್ಯಮಂತ್ರಿಯಾದರೆ ಸಂತೋಷಪಡುತ್ತೇನೆ ಎಂದರು.

ತುಳಿತಕ್ಕೊಳಗಾಗಿರುವ ವರ್ಗಕ್ಕೆ ಆಡಳಿತ ಸಿಗಬೇಕು. ಅಂತಹ ವರ್ಗಕ್ಕೆ ಆಡಳಿತ ಸಿಗುತ್ತದೆ ಅಂದರೆ ಸಂತೋಷ. ನಾವೆಲ್ಲರೂ ಅಂತಹ ವರ್ಗದ ಪರವಿರಬೇಕು ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read