ಬೆನ್ನುಮೂಳೆಗೆ ಪುಷ್ಟಿ ಕೊಡುವ ‘ಪಪ್ಪಾಯ’

ಪರಂಗಿ ಡಯಾಬಿಟೀಸ್‌ನಿಂದ ಬರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮೂಳೆಗಳ ಪುಷ್ಟಿಗೆ ಇದರಲ್ಲಿರುವ ವಿಟಮಿನ್-ಕೆ ಸಹಾಯಕವಾಗಿದೆ. ಇದು ಮೂಳೆಗಳು ಬಲವಾಗಿರುವಂತೆ ಮಾಡುತ್ತದೆ. ಆರ್ಥರೈಟೀಸ್ ಅನ್ನು ನಿರೋಧಿಸುತ್ತದೆ. ಪ್ರತಿದಿನ ಪರಂಗಿಹಣ್ಣು ತಿನ್ನುವವರಿಗೆ ಕೀಲುನೋವು ಬರುವುದಿಲ್ಲ.

ನಿಯಮಿತ ಋತುಸ್ರಾವದ ಸಮಸ್ಯೆಯನ್ನು ಹೊಂದಿರುವವರು ಹಸಿ ಪರಂಗಿಕಾಯಿ, ಇಲ್ಲವೇ ರಸವನ್ನು ಕುಡಿದರೂ ಸರಿಹೋಗುತ್ತದೆ. ಪರಂಗಿ ಹಣ್ಣು ದೇಹದಲ್ಲಿ ಉಷ್ಣತೆಯನ್ನು ಉತ್ಪತ್ತಿ ಮಾಡುವುದರಿಂದ ಈಸ್ಟ್ರೋಜನ್ ಹಾರ್ಮೊನ್ ಉತ್ಪತ್ತಿಯನ್ನು ಪ್ರೇರೇಪಿಸುವ ಮೂಲಕ ಮಾಸಿಕ ಋತುಸ್ರಾವವನ್ನು ಕ್ರಮಬದ್ದವಾಗಿಸುತ್ತದೆ. ಪರಂಗಿಯನ್ನು ಪ್ರತಿದಿನ ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆಯಾಗುತ್ತದೆ.

ಕೊಬ್ಬಿನ ಪದಾರ್ಥಗಳಿಂದ ಉಂಟಾಗುವ ಸಮಸ್ಯೆಯನ್ನು ಪಾರು ಮಾಡುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಗೂ ಸಹ ರಕ್ಷಣೆಯನ್ನು ನೀಡುತ್ತದೆ. ಆಯಾಸ, ಅನಾರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಕ್ಯಾನ್ಸರ್ ನಿವಾರಣೆಯಲ್ಲೂ ಸಹ ಪರಂಗಿ ಹಣ್ಣು ತುಂಬಾ ಉಪಯೋಗಕಾರಿಯಾಗಿದೆ. ಇದರಲ್ಲಿ ಬಿಟಾಕೆರೋಟಿನ್, ಲೂಟಿನ್ ನಂತಹ ಆ್ಯಂಟಿ ಆಕ್ಸಿಡೆಂಟ್‌ಗಳು ಇವೆ. ಇವು ಕ್ಯಾನ್ಸರ್ ಕಣಗಳೊಂದಿಗೆ ಹೋರಾಡುತ್ತದೆ.

ಪರಂಗಿ ಹಣ್ಣು ತಿನ್ನುವುದರಿಂದ ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಕಣ್ಣಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಕಿತ್ತಳೆ, ಸೇಬುಗಿಂತ ಪರಂಗಿ ಹಣ್ಣಿನಲ್ಲಿ ವಿಟಮಿನ್-ಇ ಅಧಿಕವಾಗಿರುತ್ತದೆ. ಪರಂಗಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಕಣ್ಣಿನ ಪೊರೆಯನ್ನು ಹೆಚ್ಚು ನಯವಾಗಿ, ಮೃದುಗೊಳಿಸಲು ಸಹಾಯ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read