ಪನ್ನೀರ್ ಜಾಲ್ಫ್ರೆಜಿ ಸುಲಭವಾಗಿ ಮಾಡಿ ಸವಿಯಿರಿ

ಹೊಟೇಲ್ ಗಳಲ್ಲಿ ಪನ್ನೀರ್ ಡಿಶ್ ಇದ್ದೇ ಇರುತ್ತೆ. ನಾವೂ ಬಾಯಿ ಚಪ್ಪರಿಸಿ ಪನ್ನೀರ್ ತಿನಿಸುಗಳನ್ನು ತಿನ್ನುತ್ತೇವೆ. ಪ್ರತಿ ಬಾರಿ ಹೊಟೇಲ್ ಗೆ ಹೋಗಿ ತಿನ್ನೋದು ದುಬಾರಿ. ಮನೆಯಲ್ಲಿಯೇ ಸುಲಭವಾಗಿ ಪನ್ನೀರ್ ಜಾಲ್ಫ್ರೆಜಿ ಮಾಡಿ ಸವಿಯಬಹುದು. ಪನ್ನೀರ್ ಜಾಲ್ಫ್ರೆಜಿ ಮಾಡೋದು ಬಹಳ ಸುಲಭ.

ಪನ್ನೀರ್ ಜಾಲ್ಫ್ರೆಜಿ ಮಾಡಲು ಬೇಕಾಗುವ ಪದಾರ್ಥ:

150 ಗ್ರಾಂ ಪನ್ನೀರ್ ( 2 ಇಂಚಿನಂತೆ ಉದ್ದದಾಗಿ ಕತ್ತರಿಸಿದ್ದು)

¼ ಕಪ್ ಕ್ಯಾರೆಟ್ ( 2 ಇಂಚು ಉದ್ದುದ್ದ ಕತ್ತರಿಸಿದ್ದು)

1 ಮಧ್ಯಮ ಗಾತ್ರದ ಈರುಳ್ಳಿ ( ಕತ್ತರಿಸಿದ್ದು)

1 ಹಸಿರು ಮೆಣಸಿನ ಕಾಯಿ ( ಉದ್ದವಾಗಿ ಕತ್ತರಿಸಿದ್ದು)

1 ಡೊಳ್ಳು ಮೆಣಸು ( ಉದ್ದವಾಗಿ ಕತ್ತರಿಸಿದ್ದು)

1 ಟೋಮೋಟೋ ( ಕತ್ತರಿಸಿದ್ದು)

1/4 ಕಪ್ ಟೋಮೋಟೋ ಪ್ಯೂರಿ

1 ಟೀ ಸ್ಪೂನ್ ಜೀರಿಗೆ

1 ಟೀ ಸ್ಪೂನ್ ಟೋಮೋಟೋ ಕೆಚಪ್

1 ಚಮಚ ಕೆಂಪು ಮೆಣಸಿನ ಪುಡಿ

1 ಚಮಚ ಬೆಳ್ಳುಳ್ಳಿ-ಶುಂಠಿ ಪೇಸ್ಟ್

1/8 ಚಮಚ ಅರಿಶಿನ ಪುಡಿ

1 ಚಮಚ ಕೊತ್ತಂಬರಿ ಪುಡಿ

1/4  ಚಮಚ ಮಸಾಲಾ ಪುಡಿ

ರುಚಿಗೆ ತಕ್ಕಷ್ಟು ಉಪ್ಪು, 2 ಚಮಚ ಎಣ್ಣೆ, ಸ್ವಲ್ಪ ಕೊತ್ತಂಬರಿ ಸೊಪ್ಪು ಅಲಂಕಾರಕ್ಕೆ.

ಪನ್ನೀರ್ ಜಾಲ್ಫ್ರೆಜಿ ಮಾಡುವ ವಿಧಾನ:

ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಮಧ್ಯಮ ಜ್ವಾಲೆಯಲ್ಲಿ ಬಿಸಿ ಮಾಡಿ. ಇದಕ್ಕೆ ಜೀರಿಗೆ ಹಾಕಿ ಹುರಿದುಕೊಳ್ಳಿ. ನಂತ್ರ ಕತ್ತರಿಸಿಟ್ಟ ಈರುಳ್ಳಿ ಹಾಕಿ ಫ್ರೈ ಮಾಡಿ.

ನಂತ್ರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ. ಕ್ಯಾರೆಟ್, ಮೆಣಸಿನ ಕಾಯಿ ಹಾಕಿ 2 ನಿಮಿಷ ಫ್ರೈ ಮಾಡಿ. ನಂತ್ರ ಟೋಮೋಟೋ ಹಾಗೂ ಡೊಳ್ಳು ಮೆಣಸು ಹಾಕಿ. ಟೋಮೋಟೋ ಕೆಚಪ್, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲೆ ಪುಡಿ ಹಾಗೂ ಉಪ್ಪನ್ನು ಹಾಕಿ.

ಇದಾದ ನಂತ್ರ ಒಂದರಿಂದ ಮೂರು ಕಪ್ ನೀರು ಹಾಕಿ. ಎರಡು ನಿಮಿಷಗಳ ಕಾಲ ಕುದಿಸಿ. ನಂತ್ರ ಪನ್ನೀರ್ ಹಾಕಿ ಬೇಯಲು ಬಿಡಿ. ಗ್ರೇವಿಯಂತಾದ ಮೇಲೆ ಗ್ಯಾಸ್ ಬಂದ್ ಮಾಡಿ. ಕೊತ್ತಂಬರಿ ಸೊಪ್ಪನ್ನು ಅಲಂಕರಿಸಿ ಸರ್ವ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read