ನವದೆಹಲಿ: ಮಂಗಳವಾರ ಸಂಜೆ ದೆಹಲಿಯಿಂದ ಶ್ರೀನಗರಕ್ಕೆ ಹೋಗುತ್ತಿದ್ದ ಇಂಡಿಗೋ ವಿಮಾನವು ಗಾಳಿಯಲ್ಲಿ ತೀವ್ರ ಹವಾಮಾನ ಪ್ರಕ್ಷುಬ್ಧತೆಯನ್ನು ಅನುಭವಿಸಿದೆ. ಇದರಿಂದಾಗಿ ಪೈಲಟ್ ವಾಯು ಸಂಚಾರ ನಿಯಂತ್ರಣ(ಎಟಿಸಿ)ಯೊಂದಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
6E2142 ವಿಮಾನವು ಶ್ರೀನಗರವನ್ನು ಸಮೀಪಿಸುತ್ತಿರುವಾಗ ಆಲಿಕಲ್ಲು ಮಳೆಯನ್ನು ಎದುರಿಸಿತು. ಈ ಘಟನೆಯಿಂದ ವಿಮಾನದ ಮುಂಭಾಗದ ಕೋನ್‌ಗೆ ತೀವ್ರ ಹಾನಿಯಾಗಿದೆ. ಆದರೆ ಸಿಬ್ಬಂದಿ ಸಂಜೆ 6.30 ಕ್ಕೆ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಮಾನದೊಳಗಿನ ಪ್ರಯಾಣಿಕರೊಬ್ಬರು ಚಿತ್ರೀಕರಿಸಿದ ವೈರಲ್ ವೀಡಿಯೊದಲ್ಲಿ, ವಿಮಾನದ ಮೇಲೆ ಆಲಿಕಲ್ಲುಗಳು ನಿರಂತರವಾಗಿ ಬಡಿಯುತ್ತಿರುವುದನ್ನು ತೋರಿಸಿದೆ. ಇದರಿಂದಾಗಿ ಕ್ಯಾಬಿನ್ ತೀವ್ರವಾಗಿ ಅಲುಗಾಡುತ್ತಿದೆ. ವಿಮಾನವು ತೀವ್ರ ಹವಾಮಾನವನ್ನು ಎದುರಿಸುತ್ತಿರುವಾಗ ಕ್ಯಾಬಿನ್‌ನಲ್ಲಿ ಕೂಗು ಮತ್ತು ಭಯ ಹರಡುತ್ತಿರುವುದನ್ನು ದೃಶ್ಯದಲ್ಲಿದೆ.
ಲ್ಯಾಂಡಿಂಗ್ ನಂತರ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ವಿಮಾನಕ್ಕೆ ಸಾಕಷ್ಟು ಹಾನಿಯಾಗಿದೆ. ತುರ್ತು ದುರಸ್ತಿಗಾಗಿ ಅದನ್ನು ನೆಲಕ್ಕೆ ಇಳಿಸಲಾಗಿದೆ.
“ದೆಹಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ 6E2142 ಕೆಟ್ಟ ಹವಾಮಾನವನ್ನು ಅನುಭವಿಸಿತು(ಆಲಿಕಲ್ಲು ಮಳೆ), ಇದನ್ನು ATC SXR(ಶ್ರೀನಗರ) ಪೈಲಟ್ ತುರ್ತು ಪರಿಸ್ಥಿತಿಯನ್ನು ವರದಿ ಮಾಡಿದ್ದಾರೆ” ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ವಿಮಾನ ಸಿಬ್ಬಂದಿ ಮತ್ತು 227 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಮತ್ತು ವಿಮಾನವನ್ನು ವಿಮಾನಯಾನ ಸಂಸ್ಥೆಯು ಎಂದು ಘೋಷಿಸಿದೆ. ವಿಮಾನವು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಘಟನೆಯ ಬಗ್ಗೆ ಇಂಡಿಗೋ ಅಧಿಕೃತ ಹೇಳಿಕೆ ನೀಡಿದೆ.
IndiGo issues press statement – “IndiGo flight 6E 2142 operating from Delhi to Srinagar encountered sudden hailstorm en route. The flight and cabin crew followed established protocol and the aircraft landed safely in Srinagar. The airport team attended to the customers after… pic.twitter.com/clliOB3lwt
— ANI (@ANI) May 21, 2025