BREAKING: ವಿಧಾನ ಪರಿಷತ್ ನಲ್ಲಿ ಪಂಚಾಯತ್ ರಾಜ್ ವಿಧೇಯಕ ಅಂಗೀಕಾರ: ಬಹುಮತವಿದ್ರೂ ಬಿಜೆಪಿಗೆ ಮುಖಭಂಗ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಪರಿಷತ್ ನಲ್ಲಿ ಪಂಚಾಯತ್ ರಾಜ್ ವಿಧೇಯಕ ಅಂಗೀಕಾರಗೊಂಡಿದೆ.

ಧ್ವನಿ ಮತದ ಮೂಲಕ ವಿಧೇಯಕ ಅಂಗೀಕಾರವಾಗಿದ್ದು, ವಿಧಾನಪರಿಷತ್ ನಲ್ಲಿ ಬಹುಮತವಿದ್ದರೂ ವಿಪಕ್ಷ ಬಿಜೆಪಿಗೆ ಮುಖಭಂಗವಾಗಿದೆ. ವಿಧೇಯಕಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ವಿರೋಧ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಬಿಲ್ ಅನ್ನು ಮತಕ್ಕೆ ಹಾಕಿದ್ದಾರೆ. ವಿಧೇಯಕದ ಪರವಾಗಿ 26, ವಿಧೇಯಕದ ವಿರುದ್ಧವಾಗಿ 25 ಮತಗಳು ಚಲಾವಣೆಯಾಗಿದೆ.

ಮತದಾನದ ವೇಳೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕೆಲವು ಸದಸ್ಯರು ಗೈರು ಹಾಜರಾಗಿದ್ದರು. ಬಿಲ್ ಪಾಸ್ ಆಗುತ್ತಿದ್ದಂತೆ ಎಂ.ಜಿ. ಮುಳೆ ಓಡೋಡಿ ಬಂದಿದ್ದಾರೆ. ಕೇವಲ ಎರಡೇ ಮತದಿಂದ ಬಿಜೆಪಿ ಹಿನ್ನಡೆ ಅನುಭವಿಸಿದೆ. ವಿಧಾನಪರಿಷತ್ತಿನಲ್ಲಿ ಬಹುಮತವಿದ್ದರೂ ಬಿಜೆಪಿಗೆ ಹಿನ್ನಡೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read