BIG NEWS: ರೈಲಿನಲ್ಲಿ ಬೆಂಕಿ ದುರಂತ; 10 ಪ್ರಯಾಣಿಕರು ಸಜೀವದಹನ ಪ್ರಕರಣ; ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ರೈಲ್ವೆ ಇಲಾಖೆ

ಮಧುರೈ: ಪನಲೂರು-ಮಧುರೈ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ 10 ಪ್ರಯಾಣಿಕರು ಸಜೀವದಹನಗೊಂಡಿದ್ದಾರೆ. 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪನಲೂರು-ಮಧುರೈ ಎಕ್ಸ್ ಪ್ರೆಸ್ ಟ್ರೇನ್ ಮಧುರೈನ ಯಾರ್ಡ್ ಬಳಿ ಕೆಲ ಕಾಲ ನಿಲುಗಡೆಗೊಂಡಿತ್ತು. ಈ ವೇಳೆ ರೈಲಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲಿ ರೈಲಿನ ಬೋಗಿಗಳು ಹೊತ್ತಿ ಉರಿದಿವೆ. ದುರಂತದಲ್ಲಿ 10 ಪ್ರಯಾಣಿಕರು ಸಜೀವದಹನಗೊಂಡಿದ್ದಾರೆ. ಮೃತರು ಉತ್ತರಪ್ರದೇಶ ಮೂಲದವರಾಗಿದ್ದು, ತೀರ್ಥಯಾತ್ರೆಗೆಂದು ಬಂದಿದ್ದರು ಎನ್ನಲಾಗಿದೆ.

ರೈಲಿನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಬಲಿಯಾದವರ ಕುಟುಂಬದವರಿಗೆ ರೈಲ್ವೆ ಇಲಾಖೆ ಪರಿಹಾರ ಘೋಷಿಸಿದೆ. ಮೃತ 10 ಜನರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read