ಕನ್ನಡದ ಕೋಟ್ಯಾಧಿಪತಿಯಲ್ಲಿ 50 ಲಕ್ಷ ಗೆದ್ದಿದ್ದ ಪಂಪಣ್ಣ ! ವಾಲ್ಮೀಕಿ ಹಗರಣದಲ್ಲಿ 50 ಲಕ್ಷ ಪಡೆದಿದ್ರಾ..?

ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಇಡಿ ವಶದಲ್ಲಿರುವ ಶಾಸಕ ದದ್ದಲ್ ಪಿಎ ಪಂಪಣ್ಣ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಎಂಬ ವಿಚಾರ ಕೆಲವರಿಗೆ ಗೊತ್ತಿಲ್ಲ.

ಹೌದು, ನಟ ಪುನೀತ್ ರಾಜ್ ಕುಮಾರ್ ಅವರು ನಡೆಸಿಕೊಡುತ್ತಿದ್ದ ಜನಪ್ರಿಯ ಕಾರ್ಯಕ್ರಮ ಕೋಟ್ಯಾಧಿಪತಿಯಲ್ಲಿ ಶಾಸಕ ದದ್ದಲ್ ಪಿಎ ಪಂಪಣ್ಣ ಕೂಡ ಭಾಗವಹಿಸಿದ್ದರು. ಕೋಟ್ಯಾಧಿಪತಿಯಲ್ಲಿ ಜಾಣ್ಮೆಯ ಆಟ ಆಡಿದ್ದ ಪಂಪಣ್ಣ ಬರೋಬ್ಬರಿ 50 ಲಕ್ಷ ಗೆದ್ದಿದ್ದರು. ಶಿಕ್ಷಕರಾಗಿದ್ದಲೇ ಕನ್ನಡ ಕೋಟ್ಯಾಧಿಪತಿ ಗೇಮ್ ಶೋ ನಲ್ಲಿ ಸ್ಪರ್ಧಿಸಿದ್ದ ಪಂಪಣ್ಣ50 ಲಕ್ಷ ಗೆದ್ದಿದ್ದರು.

ಇದೀಗ ವಾಲ್ಮೀಕಿ ನಿಗಮ ಹಗರಣದಲ್ಲಿ 50 ಲಕ್ಷ ಪಡೆದ ಆರೋಪದಲ್ಲಿ ಪಂಪಣ್ಣ ಹೆಸರು ಕೇಳಿಬಂದಿದ್ದು, ಕೋಟ್ಯಾಧಿಪತಿಯಲ್ಲಿ 50 ಲಕ್ಷ ಗೆದ್ದಿದ್ದ ಪಂಪಣ್ಣ ವಾಲ್ಮೀಕಿ ನಿಗಮ ಹಗರಣದಲ್ಲೂ 50 ಲಕ್ಷ ಪಡೆದ್ರಾ..? ಎಂಬುದು ಸದ್ಯಕ್ಕಿರುವ ಪ್ರಶ್ನೆ. ಸರ್ಕಾರಿ ಶಾಲೆಯ ಶಿಕ್ಷಕನಾಗಿ ಕೆಲಸ ಮಾಡಿದ್ದ ಪಂಪಣ್ಣ ನಂತರ ಪರೀಕ್ಷೆ ಬರೆದು ಪಿಡಿಒ ಕೆಲಸಕ್ಕೆ ಸೇರಿದ್ದರು. ಇದಾದ ಬಳಿಕ ರಾಜಕೀಯ ನಂಟು ಬೆಳೆಸಿಕೊಂಡ ಪಂಪಣ್ಣ ಕಾಂಗ್ರೆಸ್ ಶಾಸಕ ದದ್ದಲ್ ಆಪ್ತ ಸಹಾಯಕನಾಗಿ ಸೇರಿಕೊಂಡರು. ಕೆಲ ದಿನಗಳ ಹಿಂದೆ ಪಿಎ ಹುದ್ದೆಗೆ ರಾಜೀನಾಮೆ ನೀಡಿರುವ ಅವರು, ನೂತನವಾಗಿ ಎಂಎಲ್ಸಿಯಾಗಿರುವ ವಸಂತಕುಮಾರ್ ಬಳಿ ಆಪ್ತ ಸಹಾಯಕರಾಗಿ ಸೇರಿಕೊಂಡಿದ್ದರು. ದದ್ದಲ್ ವಾಲ್ಮೀಕಿ ನಿಗಮ ಅಧ್ಯಕ್ಷರಾದ ಬಳಿಕ ಪಂಪಣ್ಣ ಹೆಸರು ಬೆಳಕಿಗೆ ಬಂದಿದೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read