BIG NEWS: ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್ ನಲ್ಲಿ ಮೈಸೂರಿಗೆ ಹೋಗುವಂತೆ ಹೇಳಿದ್ದೇನೆ; ನಾನೂ ಬಸ್ ನಲ್ಲಿ ಕುಳಿತು ನೋಡಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ನೂತನ ಪಲ್ಲಕ್ಕಿ ಬಸ್ ಗಳಿಗೆ ವಿಧಾನಸೌಧದ ಮುಂಭಾಗ ಚಾಲನೆ ನೀಡಲಾಗಿದ್ದು, ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಇಡೀ ದೇಶದಲ್ಲಿಯೇ ನಮ್ಮ ರಾಜ್ಯದ ಸಾರಿಗೆ ಮಾದರಿಯಾಗಿದೆ. ಇಲ್ಲಿನ ಸಾರಿಗೆ ಸೇವೆಯನ್ನು ಇತರ ರಾಜ್ಯಗಳು ಅಳವಡಿಸಿಕೊಳ್ಳುವ ಚಿಂತನೆ ನಡೆಸಿವೆ ಎಂದು ಹೇಳಿದರು.

148 ಪಲ್ಲಕ್ಕಿ ಬಸ್ ಗಳಿಗೆ ಚಾಲನೆ ದೊರೆತಿದೆ. ನೂತನ ಬಸ್ ಗಳಿಗೆ ಪಲ್ಲಕ್ಕಿ ಹೆಸರು ಕೊಟ್ಟ ಸಚಿವರಿಗೆ ಪ್ರಶಸ್ತಿ ಕೊಡಬೇಕು. ಪಲ್ಲಕ್ಕಿ ಬಸ್ ಪ್ರತಿ ಮನೆಯ ಮಹಾರಾಣಿಯರನ್ನು ಕರೆದುಕೊಂಡು ಹೋಗಲಿದೆ ಎಂದು ತಿಳಿಸಿದರು.

ನಾನು ಪಲ್ಲಕ್ಕಿ ಬಸ್ ನಲ್ಲಿ ಕುಳಿತು ನೋಡಿದೆ. ಹಾಗೆನೇ ಬಸ್ ಸೀಟ್ ನಲ್ಲಿ ಮಲಗಿ ನೋಡಿದೆ. ಸರಿಯಾಗಿ ಬಸ್ ಸೀಟ್ 6 ಅಡಿ ಉದ್ದವಿದೆ. ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್ ನಲ್ಲಿ ಮೈಸೂರಿಗೆ ಹೋಗುವಂತೆ ತಿಳಿಸಿದ್ದೇನೆ ಎಂದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read