ರೆಕಾರ್ಡಿಂಗ್ ವೇಳೆ ಜಲಪಾತಕ್ಕೆ ಬಿದ್ದು ಕಂಟೆಂಟ್ ಕ್ರಿಯೇಟರ್ ಸಾವು; ಬೆಚ್ಚಿಬೀಳಿಸುವಂತಿದೆ ಫೋಟೋ

ಮುಂಬೈನ ಖ್ಯಾತ ಕಂಟೆಂಟ್ ಕ್ರಿಯೇಟರ್ ಮತ್ತು ಚಾರಣಿಗ 24 ವರ್ಷದ ಮಜ್ ಶೇಖ್ ಪಾಲ್ಘರ್‌ನಲ್ಲಿ ಜಲಪಾತಕ್ಕೆ ಧುಮುಕಿ ಸಾವನ್ನಪ್ಪಿದ್ದಾರೆ. ಮಜ್ ಶೇಖ್ ತನ್ನ ಸ್ನೇಹಿತರಾದ ಸೈಫ್ ಮತ್ತು ಜೊಹೈಬ್ ಅವರೊಂದಿಗೆ ಪಾಲ್ಘರ್ ಜಿಲ್ಲೆಯ ಜವಾಹರ್ ತಾಲೂಕಿನ ಧಾಬೋಸಾ ಜಲಪಾತಕ್ಕೆ ಭೇಟಿ ನೀಡಿದ್ದರು.

ಮುಂಬೈನಿಂದ 135 ಕಿಮೀ ದೂರದಲ್ಲಿರುವ ಧಬೋಸಾ ಜಲಪಾತವು ಲೆಂಡಿ ನದಿಯಿಂದ ಸೃಷ್ಟಿಯಾಗಿದೆ. ಭಾನುವಾರ (ಮೇ 5) ಮೂವರೂ ಜಲಪಾತಕ್ಕೆ ಭೇಟಿ ನೀಡಿದ್ದರು. ಸೈಫ್ ಆಕ್ಷನ್ ರೆಕಾರ್ಡ್ ಮಾಡುತ್ತಿದ್ದಾಗ ಮಜ್ ಶೇಖ್ ಮತ್ತು ಜೊಹೈಬ್ ಎತ್ತರದಿಂದ ಜಲಪಾತಕ್ಕೆ ಧುಮುಕಿದ್ದಾರೆ.

ಸಾಹಸ ಆಧಾರಿತ ಕಂಟೆಂಟ್‌ಗೆ ಹೆಸರುವಾಸಿಯಾಗಿದ್ದ ಮಜ್ ಶೇಖ್ ತಲೆ ಬಂಡೆಗೆ ಬಡಿದಿದೆ. ಈ ವೇಳೆ ತೀವ್ರ ಗಾಯಗಳಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆತನ ಶವವನ್ನು ಹೊರತೆಗೆಯಲು ಜವಾಹರ್ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಮುಂಬೈ ಮತ್ತಿತರ ಕಡೆಯಿಂದ ಬರುವ ಹವ್ಯಾಸಿ ಪ್ರವಾಸಿಗರಿಗೆ ಇಲ್ಲಿನ ಜಲಪಾತದ ಆಳ ಗೊತ್ತಿಲ್ಲ. ಸರಿಯಾಗಿ ಈಜಲು ಬರದವರು ಇಂತಹ ಸಾಹಸಕ್ಕೆ ಕೈ ಹಾಕುವುದರಿಂದ ಅನಾಹುತಗಳು ಸಂಭವಿಸುತ್ತವೆ. ಪೋಷಕರು ಎಚ್ಚರವಹಿಸಬೇಕೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read