ಚಲಿಸುತ್ತಿದ್ದ ರೈಲೊಂದನ್ನು ಏರಲು ಓಡಿ ಹೋಗುವ ಯತ್ನದಲ್ಲಿ ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಸಿಲುಕಲಿದ್ದ ಪ್ರಯಾಣಿಕನೊಬ್ಬನನ್ನು ಜಿಆರ್‌ಪಿ ಪೇದೆಯೊಬ್ಬರು ಪಾರು ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಜರುಗಿದೆ.
ವಿಜಯ್ ಮಾಲೇಕರ್, 74, ಹೆಸರಿನ ಈ ಪ್ರಯಾಣಿಕ ಮಧ್ಯ ರಾತ್ರಿಯ ವೇಳೆ ಚಲಿಸುತ್ತಿದ್ದ ರೈಲೊಂದನ್ನು ಏರಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಆಯತಪ್ಪಿದ ಕಾರಣ ವಿಜಯ್ ರೈಲು ಹಾಗೂ ಪ್ಲಾಟ್‌ಫಾರಂ ನಡುವೆ ಬಿದ್ದಿದ್ದಾರೆ.
ಅಲ್ಲಿಯೇ ಇದ್ದ ಪೇದೆ ಕೂಡಲೇ ವಿಜಯ್‌ರನ್ನು ಮೇಲಕ್ಕೆತ್ತಿದ್ದಾರೆ. ಸಂಪೂರ್ಣ ಘಟನೆಯು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
https://twitter.com/sirajnoorani/status/1643981011959812097?ref_src=twsrc%5Etfw%7Ctwcamp%5Etweetembed%7Ctwterm%5E1643981011959812097%7Ctwgr%5E98411769a2b916ca71e16bf0e4f18d1fd82a4a5b%7Ctwcon%5Es1_&ref_url=https%3A%2F%2Fwww.freepressjournal.in%2Fmumbai%2Fpalghar-cop-saves-elderly-man-who-fell-into-gap-between-train-and-platform-in-vasai-video-surfaces