ಪಾರ್ಟಿ ಅಲ್ಲ……..ಇದು ಇಫ್ತಿಯಾರ್ ಕೂಟ: ಔತಣಕ್ಕೆ ಬಂದ ನಟಿಗೆ ನೆಟ್ಟಿಗರ ಕ್ಲಾಸ್

ರಂಜಾನ್ ತಿಂಗಳಲ್ಲಿ ಮುಸ್ಲಿ ಬಾಂಧವರು ಉಪವಾಸ ಮಾಡುವುದು ಸಾಮಾನ್ಯ. ಹಬ್ಬದ ಪ್ರಯುಕ್ತ ಇಫ್ತಿಯಾರ್ ಕೂಟವನ್ನ ಏರ್ಪಡಿಸಿ ಸ್ನೇಹಿತರನ್ನ ಆಮಂತ್ರಿಸುತ್ತಾರೆ. ಬಾಲಿವುಡ್‌ನಲ್ಲೂ ಸಹ ಗಣ್ಯರು ಇಫ್ತಿಯಾರ್ ಕೂಟವನ್ನ ಆಗಾಗ ಏರ್ಪಡಿಸುತ್ತಾರೆ. ಅದರಲ್ಲಿ ಹಾಲಿವುಡ್ ತಾರೆಯರು ಸೇರಿದಂತೆ, ಅನೇಕ ಗಣ್ಯರು ಪಾಲ್ಗೊಳ್ಳುತ್ತಾರೆ.

ಇತ್ತಿಚೆಗೆ ಬಾಬಾ ಸಿದ್ದಿಕ್ ಇಫ್ತಾರ್ ಕೂಟವನ್ನ ಏರ್ಪಡಿಸಿದ್ದರು. ಇಲ್ಲಿಗೆ ಬಂದ ಕೆಲ ನಟಿಯರು ತೊಟ್ಟ ಉಡುಗೆ-ತೊಡುಗೆಗಳು ಕೆಲವರ ಕೋಪಕ್ಕೆ ಕಾರಣವಾಗಿದೆ. ಅದರಲ್ಲಿ ಪಾಲಕ್ ತಿವಾರಿ ಕೂಡಾ ಒಬ್ಬರಾಗಿದ್ದಾರೆ. ಈಗ ಇವರು ಟ್ರೋಲ್ ಪೇಜ್‌ಗಳಿಗೆ ಆಹಾರವಾಗಿದ್ದಾರೆ.

ನಟ ಸಲ್ಮಾನ್ ಖಾನ್ ಅವರ ‌ʼಕಿಸಿ ಕಾ ಭಾಯ್ ಕಿಸಿ ಕಿ ಜಾನ್ʼ ಚಿತ್ರದ ಸ್ಟಾರ್‌ಕಾಸ್ಟ್ ನೊಂದಿಗೆ ಬಾಬಾ ಸಿದ್ದಿಕಿ ಏರ್ಪಡಿಸಿದ್ದ ಈ ಇಫ್ತಿಯಾರ್ ಕೂಟಕ್ಕೆ ಬಂದಿದ್ದಾರೆ. ಆಗ ಇವರ ಜೊತೆ ಜೊತೆಗೆ ಪೂಜಾ ಹೆಗ್ಡೆ ಮತ್ತು ಪಾಲಕ್ ತಿವಾರಿ ಕೂಡ ಬರುತ್ತಾರೆ. ಈ ಕಾರ್ಯಕ್ರಮಕ್ಕೆ ಇವರು ದೇಹ ಪ್ರದರ್ಶಿಸುವಂತ ಉಡುಗೆ ತೊಟ್ಟು ಬಂದಿದ್ದೇ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ

ಪಾಲಕ್ ತಿವಾರಿ ಅವರು ಮಿರರ್ ವರ್ಕ್ ಇರುವ ಬೂದು ಬಣ್ಣದ ಲೆಹೆಂಗಾ ಚೋಲಿ ಜೊತೆಗೆ, ಪಳ ಪಳ ಹೊಳೆಯುವ ಡಿಪ್ ನೆಕ್‌ಲೈನ್‌ನೊಂದಿಗೆ ಕುಪ್ಪಸವನ್ನ ಧರಿಸಿರುತ್ತಾಳೆ. ಮೊದಲ ನೋಟದಲ್ಲೇ ಪಾಲಕ್‌ ಅಲ್ಲಿದ್ದವರ ಗಮನ ಸೆಳೆದಿದ್ದರು. ‌

ಅದೇ ಸಮಯದಲ್ಲಿ ಅಲ್ಲಿಗೆ ಬಂದ ಬಾಬಾ ಸಿದ್ದಿಕಿಯನ್ನ ಪಕ್ಕಕ್ಕೆ ನಿಲ್ಲಿಸಿಕೊಂಡು ಪಾಪರಾಜಿಗೆ ಪೋಸ್ ಕೊಟ್ಟಿದ್ದಾರೆ. ಇದೇ ಫೋಟೋ ಈಗ ವೈರಲ್ ಆಗಿದೆ. ನೆಟ್ಟಿಗರು ಇಫ್ತಿಯಾರ್ ಕೂಟಕ್ಕೆ ಬಂದಿದ್ದಿರೋ ಇಲ್ವೇ, ಪಾರ್ಟಿಗೆ ಬಂದಿದ್ದೀರಾ ಎಂದು ಪ್ರಶ್ನೆ ಮಾಡುವ ಮೂಲಕ ತಮ್ಮ ಕೋಪವನ್ನ ಹೊರಗೆ ಹಾಕಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read