Watch Video | ಧೋನಿಯಂತೆ ಹೆಲಿಕಾಪ್ಟರ್ ಶಾಟ್; ಪಾಕಿಸ್ತಾನ ಪೋರನ ಬ್ಯಾಟಿಂಗ್ ಶೈಲಿ ವೈರಲ್

ಕೆಲವರಿಗೆ ಕ್ರಿಕೆಟ್ ಒಂದು ಧರ್ಮ ಎಂದು ಹೇಳಬಹುದು. ಪುಟ್ಟ ಪೋರನಿಂದ ಹಿಡಿದು ವೃದ್ಧರವರೆಗೂ ಇಂದು ಕ್ರಿಕೆಟ್ ಅಚ್ಚುಮೆಚ್ಚಿನ ಆಟವಾಗಿದೆ. ಗಲ್ಲಿ ಗಲ್ಲಿಯಲ್ಲೂ ಮಕ್ಕಳು ಬ್ಯಾಟ್ ಹಿಡಿದು ಕ್ರಿಕೆಟ್ ಆಡುತ್ತಿರುತ್ತಾರೆ. ಪಾಕಿಸ್ತಾನದ ಪುಟ್ಟ ಬಾಲಕನೊಬ್ಬನ ಬ್ಯಾಟಿಂಗ್ ಶೈಲಿ ಗಮನ ಸೆಳೆದಿದ್ದು ವಿಡಿಯೋ ವೈರಲ್ ಆಗಿದೆ.

ರಝಾ ಮಹಾರ್ ಎಂಬ ಬಳಕೆದಾರರು ಇನ್ ಸ್ಟಾಗ್ರಾಂನಲ್ಲಿ ತಮ್ಮ ಪುಟ್ಟ ಸೋದರಳಿಯನ ಬ್ಯಾಟಿಂಗ್ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಬಾಲಕ ಪ್ರತಿ ಚೆಂಡನ್ನೂ ಅತಿ ಉತ್ಸಾಹದಿಂದ ಹೊಡೆಯುತ್ತಾನೆ.

ಈ ವಿಡಿಯೋ ಇದುವರೆಗೆ 18 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.
ರಾಝಾ ಅವರು ತಮ್ಮ ಚಿಕ್ಕ ಸೋದರಳಿಯನ ಬ್ಯಾಟಿಂಗ್ ಕೌಶಲ್ಯಗಳನ್ನು ಒಳಗೊಂಡಿರುವ ಇತರ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಕ್ಲಿಪ್ ಒಂದರಲ್ಲಿ ಚಿಕ್ಕ ಮಗು ಮಹೇಂದ್ರ ಸಿಂಗ್ ಧೋನಿ ಅವರ ಪ್ರಸಿದ್ಧ ಹೆಲಿಕಾಪ್ಟರ್ ಶಾಟ್ ಹೋಲುವಂತಹ ರೀತಿ ಬ್ಯಾಟಿಂಗ್ ಮಾಡಿದೆ.

https://youtu.be/HlKstzOkUOM

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read