ಜೈಪುರ: ಭಾರತದ ಗಡಿಯೊಳಗೆ ನುಸುಳುತ್ತಿದ್ದ ಪಾಕ್ ಪ್ರಜೆಯನ್ನು ಬಿಎಸ್ ಎಫ್ ಸಿಬ್ಬಂದಿ ಬಂಧಿಸಿರುವ ಘಟನೆ ರಾಜಸ್ಥಾನದ ಬಾರ್ಮರ್ ಬಳಿ ನಡೆದಿದೆ.
ಹಿಂದಾಲ್ (24) ಬಂದುತ ಆರೋಪಿ. ಪಾಕ್ ಪ್ರಜೆ ದನದ ಕೊಟ್ಟಿಗೆಯಲ್ಲಿ ಅಡಗಿ ಕುಳಿತಿದ್ದ. ಪರಿಶೀಲನೆ ನಡೆಸಿದಾಗ ಬಿಎಸ್ ಎಫ್ ಸಿಬ್ಬಂದಿಗಳಿಗೆ ಸಿಕ್ಕಿ ಬಿದ್ದಿದ್ದಾನೆ. ಆತನನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಬಂಧಿತನ ಬಳಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮುಂದುವರೆಸಲಾಗಿದೆ. ಬಂಧಿತ ಪಾಕಿಸ್ತಾನದ ಮಿಥಿ ಜಿಲ್ಲೆಯ ಛಚ್ರೊ ತೆಹ್ಸಿಲ್ ನಯತಲಾ ನಿವಾಸಿ. ಗಡಿ ದಾಟಿ ಭಾರತದೊಳಗೆ ಬರಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
