ಪಾಕಿಸ್ತಾನದ ಮತ್ತೊಂದು ಕುತಂತ್ರ ಬಟಾಬಯಾಲಿಗೆ. ಗಡಿ ಭಾಗದ ಟೋಲ್ ಪ್ಲಾಜಾಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲು ಯತ್ನ ನಡೆಸುತ್ತಿರುವ ಬಗ್ಗೆ ತಿಳಿದುಬಂದಿದೆ.
ಪಾಕಿಸ್ತಾನ ಐಎಸ್ಐ ಏಜೆಂಟ್ ಗಳು ಭಾರತೀಯ ಸೇನಾಧಿಕಾರಿಗಳ ರೀತಿಯಲ್ಲಿ ಗಡಿ ಭಾಗದ ಟೋಲ್ ಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಿವೆ. ಮುಕೇರಿಯನ್ ಟೋಲ್ ಪ್ಲಾಜಾಗೆ ಐಎಸ್ಐಯಿಂದ ಫೋನ್ ಕರೆ ಬಂದಿದೆ. ಹೀಗೆ ಕರೆ ಮಾಡಿ ಸೇನಾವಾಹನಗಳ ಚಲನವಲನಗಳ ಬಗ್ಗೆ ಇತರ ಮಾಹಿತಿಗಳನ್ನು ಕೇಳಿದ್ದಾರೆ. ಆದರೆ ಟೋಲ್ ಮ್ಯಾನೇಜರ್ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ತಕ್ಷಣ ಸ್ಥಳೀಯ ಯೂನಿಟ್ ಗೆ ಟೋಲ್ ಮ್ಯಾನೇಜರ್ ಮಾಹಿತಿ ನೀಡಿದ್ದಾರೆ. ಅನುಮಾನಾಸ್ಪದ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಹಾಗೂ ಯಾವುದೇ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಗಡಿ ಭಾಗದ ಟೋಲ್ ಪ್ಲಾಜಾಗಳಿಗೆ ಭಾರತೀಯ ಸೇನೆ ಸೂಚನೆ ನೀಡಿದೆ.