ಪಾಕಿಸ್ತಾನ ಅತಂತ್ರ ಫಲಿತಾಂಶ: ಸಮ್ಮಿಶ್ರ ಸರ್ಕಾರ ರಚನೆಗೆ ಆಹ್ವಾನಿಸಿದ ನವಾಜ್ ಷರೀಫ್

ಲಾಹೋರ್‌: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಫಲಿತಾಂಶ ಅತಂತ್ರವಾಗಿದೆ. ನವಾಜ್ ಶರೀಫ್ ನೇತೃತ್ವದ ಪಿಎಂಲ್-ಎನ್ ಪಕ್ಷ 66 ಸ್ಥಾನ ಗಳಿಸಿದೆ. ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ 51 ಸ್ಥಾನ ಗಳಿಸಿದೆ. ಇಮ್ರಾನ್ ಖಾನ್ ನೇತೃಪದ ಪಿಟಿಐ ಪಕ್ಷ 99 ಸ್ಥಾನ ಗಳಿಸಿದೆ. 265 ಕ್ಷೇತ್ರಗಳ ಪೈಕಿ 236 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಇನ್ನು 29 ಕ್ಷೇತ್ರಗಳ ಫಲಿತಾಂಶ ಬಾಕಿ ಇದೆ.

ಅತಂತ್ರ ಫಲಿತಾಂಶ ಹಿನ್ನಲೆಯಲ್ಲಿ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರತಿಸ್ಪರ್ಧಿಗಳನ್ನು ನವಾಜ್ ಷರೀಫ್ ಆಹ್ವಾನಿಸಿದ್ದಾರೆ. ನೆರೆಹೊರೆಯವರೊಂದಿಗೆ ಶಾಂತಿಯುತ ಸಂಬಂಧವನ್ನು ಬೆಳೆಸಿಕೊಂಡು ದೇಶವನ್ನು ಸಮೃದ್ಧಿಯತ್ತ ಕೊಂಡೊಯ್ಯಲು ಬಯಸುವುದಾಗಿ ನವಾಜ್ ಹೇಳಿದ್ದಾರೆ.

ಸ್ಪಷ್ಟವಾಗಿ ಭಾರತವನ್ನು ಉಲ್ಲೇಖಿಸಿ, ಮಾಜಿ ಪ್ರಧಾನಿ ಅವರು ನೆರೆಹೊರೆಯವರು ಸೇರಿದಂತೆ ಎಲ್ಲರೊಂದಿಗೆ ‘ಶಾಂತಿಯುತ ಸಂಬಂಧ’ವನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.

ಲಾಹೋರ್‌ನಲ್ಲಿ ತನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್, ಸಮ್ಮಿಶ್ರ ಸರ್ಕಾರ ರಚನೆಗೆ ಪಿಪಿಪಿಯ ಆಸಿಫ್ ಅಲಿ ಜರ್ದಾರಿ, ಜೆಯುಐ-ಎಫ್‌ನ ಫಜ್ಲುರ್ ರೆಹಮಾನ್ ಮತ್ತು ಎಂಕ್ಯೂಎಂ-ಪಿಯ ಖಾಲಿದ್ ಮಕ್ಬೂಲ್ ಸಿದ್ದಿಕಿ ಅವರನ್ನು ಸಂಪರ್ಕಿಸಲು ತನ್ನ ಕಿರಿಯ ಸಹೋದರ ಶೆಹಬಾಜ್‌ಗೆ ಹೇಳಿದ್ದೇನೆ ಎಂದು ಹೇಳಿದ್ದಾರೆ.

ಪಾಕಿಸ್ತಾನವನ್ನು ಪುನರ್ನಿರ್ಮಿಸಲು ನಮ್ಮೊಂದಿಗೆ ಕೈಜೋಡಿಸಲು ಪ್ರತಿಯೊಬ್ಬರನ್ನು ಆಹ್ವಾನಿಸುತ್ತಿದ್ದೇವೆ. ನಮ್ಮ ಅಜೆಂಡಾ ಕೇವಲ ಪಾಕಿಸ್ತಾನದ ಸಂತಸವಾಗಿದೆ ಎಂದು ಹೇಳಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕುಳಿತು ಸರ್ಕಾರ ರಚಿಸುವ ಅಗತ್ಯವನ್ನು ಉಲ್ಲೇಖಿಸಿದ ನವಾಜ್ ಷರೀಫ್, ಮತ್ತೆ ಮತ್ತೆ ಚುನಾವಣೆಗಳನ್ನು ನಡೆಸಲಾಗುವುದಿಲ್ಲ ಮತ್ತು ಪಾಕಿಸ್ತಾನವನ್ನು ಬಿಕ್ಕಟ್ಟಿನಿಂದ ಹೊರತರುವಲ್ಲಿ ಪ್ರತಿಯೊಬ್ಬರೂ ಸಕಾರಾತ್ಮಕ ಪಾತ್ರವನ್ನು ವಹಿಸಬೇಕು. ಈ ದೇಶದ ಎಲ್ಲಾ ಸಂಸ್ಥೆಗಳು, ಪ್ರತಿಯೊಬ್ಬರೂ ಒಟ್ಟಾಗಿ ಪಾಕಿಸ್ತಾನವನ್ನು ಈ ಬಿಕ್ಕಟ್ಟಿನಿಂದ ಹೊರತರುವಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಬೇಕು, ತಮ್ಮ ಪಕ್ಷಕ್ಕೆ ಸ್ವಂತವಾಗಿ ಸರ್ಕಾರ ರಚಿಸಲು ಬಹುಮತವಿಲ್ಲ. ಹಾಗಾಗಿ ಬೇರೆ ಪಕ್ಷಗಳನ್ನು ಸರ್ಕಾರ ರಚನೆಗೆ ಆಹ್ವಾನಿಸುತ್ತೇವೆ. ಈ ಜವಾಬ್ದಾರಿಯನ್ನು ಶೆಹಬಾಜ್ ಷರೀಫ್ ಅವರಿಗೆ ವಹಿಸಿದ್ದೇನೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read