SHOCKING: ಆಟವಾಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಕ್ರಿಕೆಟಿಗ

ಪಾಕಿಸ್ತಾನ ಮೂಲದ ಕ್ರಿಕೆಟಿಗ ಜುನೈಲ್ ಜಾಫರ್ ಖಾನ್ ಆಸ್ಟ್ರೇಲಿಯಾದಲ್ಲಿ ಕ್ಲಬ್ ಮಟ್ಟದ ಪಂದ್ಯದ ವೇಳೆ ಮೈದಾನದಲ್ಲಿ ಕುಸಿದು ಬಿದ್ದು ನಿಧನರಾಗಿದ್ದಾರೆ.

ಖಾನ್ ಓಲ್ಡ್ ಕಾನ್ಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್ ಪರ ಆಡುತ್ತಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಪ್ರಿನ್ಸ್ ಆಲ್ಫ್ರೆಡ್ ಓಲ್ಡ್ ಕಾಲೇಜಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ತಮ್ಮ ಕ್ಲಬ್ ಪರ ಆಡುತ್ತಿದ್ದರು. ಜುನೈಲ್ ಮೊದಲು 40 ಓವರ್‌ಗಳಿಗೆ ಫೀಲ್ಡಿಂಗ್ ಮಾಡಿ ನಂತರ 7 ರನ್‌ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಆಸ್ಟ್ರೇಲಿಯಾದ ಸೆಂಟ್ರಲ್ ಡೇಲೈಟ್ ಸಮಯ(ACDT) ಸಂಜೆ 4 ಗಂಟೆ ಸುಮಾರಿಗೆ ಮೈದಾನದಲ್ಲಿ ಕುಸಿದುಬಿದ್ದರು.

ದಕ್ಷಿಣ ಆಸ್ಟ್ರೇಲಿಯಾ ಈ ಬಾರಿ ತೀವ್ರ ಶಾಖದಿಂದ ಬಳಲುತ್ತಿದ್ದು, ತಾಪಮಾನವು ನಿರಂತರವಾಗಿ 40 ಡಿಗ್ರಿ ಸೆಲ್ಸಿಯಸ್ ಅನ್ನು ದಾಟುತ್ತಿದೆ. ಅಡಿಲೇಡ್ ಟರ್ಫ್ ಕ್ರಿಕೆಟ್ ಅಸೋಸಿಯೇಷನ್ ​​42 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಪಂದ್ಯಗಳನ್ನು ಆಡಲಾಗುವುದಿಲ್ಲ ಎಂದು ನಿಯಮಗಳನ್ನು ವಿಧಿಸಿದೆ.

ಖಾನ್ ಅವರ ಕ್ಲಬ್ ಅವರ ನಿಧನದ ನಂತರ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದೆ. “ಓಲ್ಡ್ ಕಾನ್ಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್‌ನ ಅಮೂಲ್ಯ ಸದಸ್ಯರ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ, ಅವರು ಇಂದು ಕಾನ್ಕಾರ್ಡಿಯಾ ಕಾಲೇಜು ಓವಲ್‌ನಲ್ಲಿ ಆಡುವಾಗ ದುರಂತ ನಡೆದಿದೆ ಎಂದು ಹೇಳಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read