‘ಉದ್ಘಾಟನೆ’ ದಿನವೇ ಜನರಿಂದ ಅಂಗಡಿ ಲೂಟಿ; ಪಾಕಿಸ್ತಾನದ ‘ವಿಡಿಯೋ ವೈರಲ್’

ಕರಾಚಿ: ಪಾಕಿಸ್ತಾನದ ಕರಾಚಿಯ ಡ್ರೀಮ್ ಬಜಾರ್ ಮಾಲ್ ಉದ್ಘಾಟನೆಯ ನಂತರ ಭಾರೀ ರಿಯಾಯಿತಿ ಪಡೆಯಲು ಆಗಮಿಸಿದ ನೂರಾರು ಜನ ಅಂಗಡಿಯನ್ನೇ ಲೂಟಿ ಮಾಡಿದ್ದಾರೆ.

ಕರಾಚಿಯ ಮಾಲ್‌ನಲ್ಲಿ ಬಟ್ಟೆ ಪರಿಕರಗಳು ಮತ್ತು ಹೋಮ್‌ವೇರ್ ಬ್ರಾಂಡ್‌ಗಳ ಅಂಗಡಿ ಓಪನ್ ಭಾರಿ ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ನೂರಾರು ಜನ ಬಲವಂತವಾಗಿ ನುಗ್ಗಿದ್ದರಿಂದ ಕಿರಿಕಿರಿ ಉಂಟಾಗಿದೆ. ಅಂಗಡಿಯನ್ನು ತೆರೆಯುವ ಜಾಹೀರಾತನ್ನು ನೋಡಿದ ಹೆಚ್ಚಿನ ಸಂಖ್ಯೆಯ ಯುವಕರು ಮತ್ತು ಜನರು ಹೆಚ್ಚಿನ ರಿಯಾಯಿತಿ ಪಡೆಯಲು ಅಂಗಡಿಗೆ ಧಾವಿಸಿ ಬಂದಿದ್ದು, ಅಂಗಡಿಯನ್ನೇ ಲೂಟಿ ಮಾಡಿದ್ದಾರೆ.

ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗುಂಪು ಅಂಗಡಿಯನ್ನು ಲೂಟಿ ಮಾಡುವುದು ಮತ್ತು ಬ್ರಾಂಡ್ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದನ್ನು ವೀಡಿಯೊಗಳಲ್ಲಿ ಕಾಣಬಹುದಾಗಿದೆ.

ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿ ಈ ಘಟನೆ ನಡೆದಿದೆ. ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಲು ಅಂಗಡಿಯನ್ನು ತೆರೆಯುವ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಯಿತು.

ಆದರೆ, ಮಾಲ್ ಆಡಳಿತ ಮಂಡಳಿ ಮತ್ತು ಅಂಗಡಿ ಮಾಲೀಕರು ಇಂತಹ ಅವ್ಯವಸ್ಥೆಯನ್ನು ನಿರೀಕ್ಷಿಸಿರಲಿಲ್ಲ. ಜನ ಸಂಖ್ಯೆಯಲ್ಲಿ ನುಗ್ಗಿದ್ದರಿಂದ ಅವ್ಯವಸ್ಥೆಯಾಗಿ ಅಂಗಡಿ ಲೂಟಿ ಮಾಡಲಾಗಿದೆ.

https://twitter.com/MeghUpdates/status/1830147399911612752

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read