ಇಸ್ಲಾಮಾಬಾದ್: ಕ್ರಿಕೆಟ್ ಪಂದ್ಯ ನಡೆಯುತ್ತಿದ್ದಗಲೇ ಸ್ಟೇಡಿಯಂ ನಲ್ಲಿ ಬಾಂಬ್ ದಾಳಿ ನಡೆದಿರುವ ಘಟನೆ ಒಆಕಿಸ್ಯಾನದ ಖೈಬರ್ ಪಂಖ್ತುಂಖ್ವಾದಲ್ಲಿ ನಡೆದಿದೆ.
ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಬಜೌರ್ ನಲ್ಲಿರುವ ಖಾರ್ ತಹಸಿಲ್ ನಲ್ಲಿರುವ ಕೌಸರ್ ಕ್ರಿಕೆಟ್ ಮೈದಾನದಲ್ಲಿ ಈ ಸ್ಫೋಟ ಸಂಭವಿಸಿದೆ.
ಯಾರನ್ನೋ ಗುರಿಯಾಗಿಸಿ ಈ ದಾಳಿ ನಡೆದಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದು ಭಯೋತ್ಪಾದಕರ ಕೃತ್ಯವಾಗಿದೆ. ಆದರೆ ಈವರೆಗೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.