ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ‘ಅಸಿಮ್ ಮುನೀರ್’ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಪಹಲ್ಗಾಮ್ ದಾಳಿ ಬಳಿಕ ಭಾರತ ಪಾಕಿಸ್ತಾನಕ್ಕೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಇದರ ನಡುವೆ ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥ ‘ಅಸಿಮ್ ಮುನೀರ್’ ಕುಟುಂಬ ಸಮೇತ ನಾಪತ್ತೆಯಾಗಿದ್ದು, ಭಾರತಕ್ಕೆ ಹೆದರಿ ಕುಟುಂಬ ಸಮೇತ ಪಲಾಯನ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಅನಾಗರಿಕ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ 27 ಮುಗ್ಧ ಜೀವಗಳಿಗೆ ಭಾರತ ನ್ಯಾಯವನ್ನು ಬಯಸುತ್ತಿರುವಂತೆಯೇ, ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಸೈಯದ್ ಅಸಿಮ್ ಮುನೀರ್ ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹಗಳು ಹರಡಿವೆ.
ಪಹಲ್ಗಾಮ್ ದಾಳಿ ನಡೆದ 48 ಗಂಟೆಯಲ್ಲಿಯೇ ಭಾರತ ಯುದ್ಧನೌಕೆ ಐಎನ್ಎಸ್ ಸೂರತ್ನಿಂದ ಕ್ಷಿಪಣಿ ಪರೀಕ್ಷೆಯನ್ನು ನಡೆಸುವ ಮೂಲಕ ಅರೇಬಿಯನ್ ಸಮುದ್ರದಲ್ಲಿರುವ ಶತ್ರುಗಳಿಗೆ ಖಡಕ್ ಸಂದೇಶವನ್ನು ರವಾನಿಸಿತ್ತು. ಇದರ ನಡುವೆ ಮುನೀರ್ ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ಊಹಾಪೋಹಗಳು ಹರಡಿವೆ.
ಕೆಲವು ಮೂಲಗಳು ಅವರು ರಾವಲ್ಪಿಂಡಿಯ ಬರೋ ಅಥವಾ ಬಂಕರ್ನಲ್ಲಿ ಅಡಗಿರಬಹುದು ಎಂದು ಸೂಚಿಸಿದರೆ, ಇತರರು ಅವರು ಪಾಕಿಸ್ತಾನದಿಂದ ಸಂಪೂರ್ಣವಾಗಿ ಪಲಾಯನ ಮಾಡಿರಬಹುದು ಎಂದು ಹೇಳಿದೆ.