ಪಾಕಿಸ್ತಾನದ ಬುಡಕಟ್ಟು ಸಮುದಾಯಗಳ ಸಶಸ್ತ್ರ ಘರ್ಷಣೆಯಲ್ಲಿ 36 ಮಂದಿ ಸಾವು: 162 ಮಂದಿ ಗಾಯ

ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕುರ್ರಂ ಜಿಲ್ಲೆಯಲ್ಲಿ ಎರಡು ಬುಡಕಟ್ಟುಗಳ ನಡುವಿನ ಸಶಸ್ತ್ರ ಘರ್ಷಣೆಯಲ್ಲಿ 36 ಮಂದಿ ಸಾವನ್ನಪ್ಪಿದ್ದಾರೆ, 162 ಮಂದಿ ಗಾಯಗೊಂಡಿದ್ದಾರೆ

ಪಾಕಿಸ್ತಾನದ ವಾಯುವ್ಯದಲ್ಲಿರುವ ಬುಡಕಟ್ಟು ಜಿಲ್ಲೆಯ ಒಂದು ತುಂಡು ಭೂಮಿಗೆ ಸಂಬಂಧಿಸಿದಂತೆ ಎರಡು ಬುಡಕಟ್ಟು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಸಶಸ್ತ್ರ ಘರ್ಷಣೆಯಲ್ಲಿ ಕನಿಷ್ಠ 36 ಜನರು ಸಾವನ್ನಪ್ಪಿದ್ದಾರೆ ಮತ್ತು 162 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾದ ಕುರ್ರಂ ಜಿಲ್ಲೆಯಲ್ಲಿ ಕಳೆದ ಐದು ದಿನಗಳಲ್ಲಿ ಬುಡಕಟ್ಟು ಘರ್ಷಣೆಯಲ್ಲಿ 36 ಜನರು ಸಾವನ್ನಪ್ಪಿದ್ದಾರೆ ಮತ್ತು 162 ಜನರು ಗಾಯಗೊಂಡಿದ್ದಾರೆ ಎಂದು ಡೆಪ್ಯುಟಿ ಕಮಿಷನರ್ ಕುರ್ರಂ, ಜಾವೇದುಲ್ಲಾ ಮೆಹ್ಸೂದ್ ತಿಳಿಸಿದ್ದಾರೆ.

ಬುಡಕಟ್ಟು ಹಿರಿಯರು, ಮಿಲಿಟರಿ ನಾಯಕತ್ವ, ಪೊಲೀಸ್ ಮತ್ತು ಜಿಲ್ಲಾಡಳಿತದ ಸಹಾಯದಿಂದ ಅಧಿಕಾರಿಗಳು ಬೋಶೆರಾ, ಮಲಿಖೇಲ್ ಮತ್ತು ದಂಡರ್ ಪ್ರದೇಶಗಳಲ್ಲಿ ಶಿಯಾ ಮತ್ತು ಸುನ್ನಿ ಬುಡಕಟ್ಟು ಜನಾಂಗದವರ ನಡುವೆ ಶಾಂತಿ ಮಾತುಕತೆ ನಡೆಸಿದ್ದಾರೆ.

ಹೋರಾಟದ ಗುಂಪುಗಳ ನಡುವೆ ಕದನ ವಿರಾಮದ ಹೊರತಾಗಿಯೂ, ಜಿಲ್ಲೆಯ ಇತರ ಕೆಲವು ಭಾಗಗಳಲ್ಲಿ ಇನ್ನೂ ಗುಂಡಿನ ದಾಳಿ ಮುಂದುವರೆದಿದೆ. ಉಳಿದ ಪ್ರದೇಶಗಳಲ್ಲಿಯೂ ಕದನ ವಿರಾಮವನ್ನು ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಪಂಗಡಗಳ ನಡುವೆ ಘರ್ಷಣೆ ನಡೆದಿತ್ತು. ಘರ್ಷಣೆಗಳು ಪೀವಾರ್, ತಂಗಿ, ಬಲಿಶ್ಖೇಲ್, ಖಾರ್ ಕಲಾಯ್, ಮಕ್ಬಾಲ್, ಕುಂಜ್ ಅಲಿಜೈ, ಪಾರಾ ಚಮ್ಕಾನಿ ಮತ್ತು ಕರ್ಮಾನ್ ಸೇರಿದಂತೆ ಇತರ ಪ್ರದೇಶಗಳಿಗೆ ಹರಡಿತು.

ಪ್ರತಿಸ್ಪರ್ಧಿಗಳು ಪರಸ್ಪರ ವಿರುದ್ಧವಾಗಿ ಮಾರ್ಟರ್ ಶೆಲ್‌ಗಳು ಮತ್ತು ರಾಕೆಟ್ ಲಾಂಚರ್‌ಗಳು ಸೇರಿದಂತೆ ಭಾರೀ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಕುರ್ರಂ ಬುಡಕಟ್ಟು ಜಿಲ್ಲೆಯ ಪ್ರಮುಖ ನಗರಗಳಾದ ಪರಚಿನಾರ್ ಮತ್ತು ಸದ್ದಾ ಮೇಲೆಯೂ ಮಾರ್ಟರ್ ಮತ್ತು ರಾಕೆಟ್ ಶೆಲ್‌ಗಳನ್ನು ಹಾರಿಸಲಾಗಿದೆ. ಪೀಡಿತ ಪ್ರದೇಶಗಳಲ್ಲಿ ಭಾರೀ ಪೊಲೀಸ್ ಮತ್ತು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read