ಮತ್ತೊಮ್ಮೆ ಮರುಕಳಿಸಿದ ಘೋರ ದುರಂತ: 3 ವರ್ಷದ ಮಗುವನ್ನು ಕೊಂದ ಬೀದಿನಾಯಿಗಳು

ಅಹ್ಮದಾಬಾದ್: ಮೈದಾನದ ಬಳಿ ಆಟವಾಡುತ್ತಿದ್ದ 3 ವರ್ಷದ ಬಾಲಕನನ್ನು ನಾಯಿಗಳ ಗುಂಪು ಕೊಂದಿರುವ ಆಘಾತಕಾರಿ ಘಟನೆ ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.

ಲಾಠಿ ತಾಲೂಕಿನ ದಮ್‌ನಗರ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಬಾಲಕ ರೋಣಕ್ ರಾಥ್ವಾ ಅವರ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಕೃಷಿ ಕಾರ್ಮಿಕರಾಗಿದ್ದಾರೆ. ಮಧುಭಾಯಿ ಸಿದ್ಪಾರಾ ಎಂಬುವವರ ಒಡೆತನದ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃಷಿ ಜಮೀನಿನ ಆಸುಪಾಸಿನಲ್ಲಿ ಮಗು ಒಂಟಿಯಾಗಿ ಆಟವಾಡುತ್ತಿತ್ತು. ಬಾಲಕನ ಪೋಷಕರು ಅಲ್ಲೇ ಸ್ವಲ್ಪ ದೂರದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಐದಾರು ನಾಯಿಗಳ ಗುಂಪು ದಾಳಿ ನಡೆಸಿ, ಬಾಲಕನ ಕತ್ತು ಹಿಡಿದುಕೊಂಡಿದೆ. ಬಾಲಕನ ತಲೆ ಮತ್ತು ಬೆನ್ನಿನ ಮೇಲೆ ಕಚ್ಚಿವೆ. ಕೂಡಲೇ ಮಗುವನ್ನು ಅವರ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆಗೆ ದಾಖಲಾದ ಸ್ವಲ್ಪ ಸಮಯದಲ್ಲೇ ಬಾಲಕ ಮೃತಪಟ್ಟಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read