’6000 ಚಮಚೆಗಳು ಕಳುವಾಗಿವೆ……’: ಪಾತ್ರೆಗಳನ್ನು ಕದ್ದೊಯ್ಯಬೇಡಿ ಎಂದು ಮನವಿ ಮಾಡಿಕೊಂಡ ಬೃಹನ್ಮುಂಬಯಿ ಪಾಲಿಕೆ ಕ್ಯಾಂಟೀನ್

ಸಾರ್ವಜನಿಕ ಸ್ಥಳಗಳಲ್ಲಿರುವ ವಸ್ತುಗಳನ್ನು ಕದ್ದು ಮನೆಗೊಯ್ಯುವ ಸಣ್ಣ ಬುದ್ಧಿಗೆ ನಮ್ಮಲ್ಲಿ ಯಾವತ್ತೂ ಕೊರತೆ ಇಲ್ಲ.

ಮುಂಬಯಿಯ ಕೆಟರಿಂಗ್ ಸರ್ವೀಸ್‌ನ ಒಂದರ ಅಂಗಳದಲ್ಲಿ ಪಾತ್ರೆಗಳನ್ನು ಕದ್ದೊಯ್ಯುವ ಪರಿಪಾಠ ವಿಪರೀತವಾದ ಕಾರಣ, ಗ್ರಾಹಕರಿಗೆ ತಮ್ಮ ಪಾತ್ರೆಗಳನ್ನು ಹಾಗೆ ಕೊಂಡೊಯ್ಯದಂತೆ ನೋಟಿಸ್ ಹಾಕಲಾಗಿದೆ.

ಸಿದ್ಧಿವಿನಾಯಕ ಕೆಟರರರ್ಸ್ ಹೆಸರಿನ ಈ ಕ್ಯಾಂಟೀನ್‌ ಘಟಕವು ಛತ್ರಪತಿ ಶಿವಾಜಿ ಟರ್ಮಿನಸ್ ಪ್ರದೇಶದಲ್ಲಿರುವ ಬ್ರಹನ್ಮುಂಬಯಿ ನಗರ ಪಾಲಿಕೆ ಕಟ್ಟಡದಲ್ಲಿದೆ. ಈ ಕ್ಯಾಂಟೀನ್‌ನಿಂದ ಬಹಳಷ್ಟು ಚಮಚೆಗಳು, ತಟ್ಟೆಗಳು ಹಾಗೂ ಗ್ಲಾಸುಗಳು ಕಾಣೆಯಾಗಿವೆ ಎಂದು ನೋಟಿಸ್‌ನಲ್ಲಿ ಹಾಕಲಾಗಿದ್ದು, ಇಲ್ಲಿಗೆ ಬರುವ ನೌಕರರು ಹಾಗೂ ಸಾರ್ವಜನಿಕರು ಇಂಥ ಪಾತ್ರೆಗಳನ್ನು ತಮ್ಮೊಂದಿಗೆ ಮನೆಗೊಯ್ಯುವ ಸಣ್ಣತನದಲ್ಲಿ ಭಾಗಿಯಾಗದಿರಲು ಮನವಿ ಮಾಡಿಕೊಳ್ಳಲಾಗಿದೆ.

ಇದೂವರೆಗೂ ತಮ್ಮಲ್ಲಿಯಿಂದ 6,000-7,000ದಷ್ಟು ಚಮಚೆಗಳನ್ನು ಕದ್ದೊಯ್ಯಲಾಗಿದ್ದು, ನೂರಾರು ಊಟದ ತಟ್ಟೆಗಳು ಹಾಗೂ ಗ್ಲಾಸುಗಳನ್ನು ಸಹ ಕದ್ದೊಯ್ಯಲಾಗಿದೆ ಎಂದು ಸಹ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read