ನಮ್ಮದು ‘ನೇಮ್ ಚೇಂಜರ್’ ಸರ್ಕಾರ ಅಲ್ಲ, ‘ಗೇಮ್ ಚೇಂಜರ್’ ಸರ್ಕಾರ : CM ಸಿದ್ದರಾಮಯ್ಯ

ಬೆಂಗಳೂರು : ನಮ್ಮದು ಗೇಮ್ ಚೇಂಜರ್ ಸರ್ಕಾರ”, ಹಳೆಯ ಯೋಜನೆಗಳಿಗೆ ಹೊಸ ಹೆಸರು ನೀಡುವ ನೇಮ್ ಚೇಂಜರ್ ಸರ್ಕಾರ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡ ಸಿಎಂ ಸಿದ್ದರಾಮಯ್ಯ ನಾವು ರಚನಾತ್ಮಕ ಆಡಳಿತ ನೀಡುತ್ತಿದ್ದೇವೆ, ಕೇಂದ್ರ ಸರ್ಕಾರವೇ ನಮ್ಮತ್ತ ನೋಡುತ್ತಿದೆ, ವಿಶ್ವಸಂಸ್ಥೆ ನಮ್ಮ ಯೋಜನೆಗಳನ್ನು ಶ್ಲಾಘಿಸಿದೆ. ಇದು ಏಳು ಕೋಟಿ ಕನ್ನಡಿಗರಿಗೂ ಹೆಮ್ಮೆಯ ವಿಷಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದ ಇಂದಿನ ಸಾಧನೆ, ನಾಳೆಯ ಜಗಕೆ ಪ್ರೇರಣೆ” ನಾಡನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವುದು ಮಾತ್ರವಲ್ಲ, ಸಮತೆ, ಸೌಹಾರ್ದತೆ ಮತ್ತು ಸಾಮರಸ್ಯದ ನೆಲೆಯಲ್ಲಿ ಸಮಾಜ ಕಟ್ಟುವ ಕೆಲಸವನ್ನು ಮಾಡುತ್ತಿದ್ದೇವೆ. ಎಲ್ಲರನ್ನೂ ಒಳಗೊಳ್ಳುವ, ಎಲ್ಲ ಕ್ಷೇತ್ರಗಳನ್ನು ವ್ಯಾಪಿಸುವ ಸುಸ್ಥಿರ, ಸರ್ವಾಂಗೀಣ ಪ್ರಗತಿಯ ಸಾಂವಿಧಾನಿಕ ಆಶಯವನ್ನು ಇಂದು ದೇಶದಲ್ಲೇ ಅಭೂತಪೂರ್ವ ರೀತಿಯಲ್ಲಿ ಸಾಕಾರಗೊಳಿಸುತ್ತಿರುವ ಹೆಮ್ಮೆ ನಮ್ಮದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read