‘ದಿ ಕೇರಳ ಸ್ಟೋರಿ’ ಚಿತ್ರ ಖರೀದಿಸಲು ‘ಒಟಿಟಿ’ ಸಂಸ್ಥೆಗಳು ಹಿಂದೇಟು : ಅಚ್ಚರಿ ಕಾರಣ ರಿವೀಲ್

ಸುದೀಪ್ತೋ ಸೇನ್ ನಿರ್ದೇಶನದ ‘ದಿ ಕೇರಳ ಸ್ಟೋರಿ’ ಚಿತ್ರ ಬಿಡುಗಡೆಯಾದಾಗ ಸಾಕಷ್ಟು ಸದ್ದು ಮಾಡಿತು ಮತ್ತು ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಚಿತ್ರವನ್ನು ಪಡೆಯಲು ಯಾವುದೇ ಒಟಿಟಿ ಪ್ಲಾಟ್ಫಾರ್ಮ್ ಗಳು ಮುಂದೆ ಬಂದಿಲ್ಲ ಎಂಬ ಅಚ್ಚರಿ ಮಾಹಿತಿ ಲಭ್ಯವಾಗಿದೆ.

ನಮ್ಮ ಬಾಕ್ಸ್ ಆಫೀಸ್ ಯಶಸ್ಸು ಚಲನಚಿತ್ರೋದ್ಯಮದ ಹಲವರನ್ನು ಕೆರಳಿಸಿದೆ. ಎಲ್ಲರೂ ಒಟ್ಟಾಗಿ ಒಟಿಟಿ ಸಂಸ್ಥೆಗಳಿಗೆ ಹೇಳಿಕೊಟ್ಟಿದ್ದಾರೆ. ಹಾಗಾಗಿ ಯಾರೂ ಕೂಡ ಈ ಸಿನಿಮಾವನ್ನು ಖರೀದಿಸಲು ಮುಂದೆ ಬಂದಿಲ್ಲ. ರಾಜಕೀಯವಾಗಿ ಕಾಂಟ್ರವರ್ಸಿ ಹೊಂದಿರುವ ಚಿತ್ರ ನಮಗೆ ಬೇಡ’ ಎಂಬ ಉತ್ತರ ಒಟಿಟಿ ಸಂಸ್ಥೆಗಳ ಕಡೆಯಿಂದ ಬಂದಿದೆ ಎಂದು ಚಿತ್ರತಂಡದವರು ಹೇಳಿದ್ದಾರೆ.

ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ನಲ್ಲಿ ₹ 230 ಕೋಟಿಗೂ ಹೆಚ್ಚು ಗಳಿಸಿದೆ ಮತ್ತು 3.40 ಕೋಟಿಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ಕೇರಳ ಸ್ಟೋರಿ 2023 ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ, ಇದು ಶಾರುಖ್ ಖಾನ್ ಅವರ ಪಠಾಣ್ ನಂತರದ ಸ್ಥಾನದಲ್ಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read