ನವದೆಹಲಿ: ಪಾಕಿಸ್ತಾನದಲ್ಲಿ ನೆಲೆಯೂರಿರುವ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನೆ ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರನ್ನು ಬಲಿಪಡೆದಿದೆ.
ಮೇ 7ರಂದು ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಐವರು ಉಗ್ರರು ಹತರಾಗಿದ್ದಾರೆ. ಇಬ್ಬರು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಹಾಗೂ ಮೂವರು ಜೈ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ದಾಳಿಯಲ್ಲಿ ಮೃತಪಟ್ಟ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಹೀಗಿದೆ.
ಮುದಾಸರ್ ಖಾದಿಯಾನ್ ಖಾನ್ ಅಲಿಯಾಸ್ ಅಬು ಜುಂದಾಲ್, ಮೊಹಮ್ಮದ್ ಯೂಸುಫ್ ಅಲಿಯಾಸ್ ಮೊಹಮ್ಮದ್ ಸಲೀಂ, ಅಬು ಆಕಾಶಾ ಅಲಿಯಾಸ್ ಖಲೈದ್, ಹಫೀಜ್ ಮೊಹಮ್ಮದ್ ಜಮೀಲ್ ಹಾಗೂ ಉಗ್ರ ಮೊಹಮ್ಮದ್ ಹಸನ್ ಖಾನ್ ನನ್ನು ಹತ್ಯೆ ಮಾಡಲಾಗಿದೆ.