ಗುಡ್ ನ್ಯೂಸ್: ಪೊಲೀಸ್ ಠಾಣೆಗೆ ಹೋಗುವ ಬದಲು ಆನ್ಲೈನ್ ಮೂಲಕವೇ ದೂರು, ಇ-ಎಫ್ಐಆರ್ ವ್ಯವಸ್ಥೆಗೆ ಚಾಲನೆ

ಬೆಂಗಳೂರು: ವಾಹನ ಕಳುವಾದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಹೋಗುವ ಮೊದಲು ಆನ್ಲೈನ್ ಮೂಲಕವೇ ದೂರು ನೀಡುವ ವ್ಯವಸ್ಥೆಯನ್ನು ರಾಜ್ಯ ಪೊಲೀಸ್ ಇಲಾಖೆ ರೂಪಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಚಾಲನೆ ನೀಡಿದ್ದಾರೆ.

ಆನ್ಲೈನ್ ಮೂಲಕವೇ ದೂರು ದಾಖಲಿಸಿ ಇ- ಎಫ್ಐಆರ್ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದೆ. ಕಾರ್, ಆಟೋ, ಸರಕು ಸಾಗಣೆ ವಾಹನ, ದ್ವಿಚಕ್ರ ವಾಹನಗಳು ಕಳವಾದ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಹೋಗುವ ಬದಲಿಗೆ ಆನ್ಲೈನ್ ಮೂಲಕವೇ ದೂರು ದಾಖಲಿಸಿ ಇ-ಎಫ್ಐಆರ್ ಪಡೆದುಕೊಳ್ಳಬಹುದಾಗಿದೆ. ಇಂತಹ ದೂರು ಆಧರಿಸಿ ಸಂಬಂಧಿಸಿದ ಠಾಣೆಗಳ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.

ವಾಹನಗಳ ಮಾಲೀಕರು ಪೊಲೀಸ್ ಠಾಣೆಗಳಿಗೆ ಅಲೆದಾಡುವುದನ್ನು ತಪ್ಪಿಸಲು ಪೊಲೀಸ್ ಇಲಾಖೆ ಈ ವ್ಯವಸ್ಥೆಯನ್ನು ರೂಪಿಸಿದೆ. https://ksp.karnataka.gov.in ಪೋಲಿಸ್ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ ಕಳುವಾದ ವಾಹನದ ವಿವರ ದಾಖಲಿಸಿ ದೂರು ಸಲ್ಲಿಸಬಹುದಾಗಿದೆ. ನಂತರ ಸಂಬಂಧಿಸಿದ ಠಾಣೆಗೆ ಸಂದೇಶ ರವಾನೆಯಾಗಲಿದ್ದು, ಠಾಣೆಗಳ ತನಿಖಾ ಅಧಿಕಾರಿ ಸಹಿ ಸಮೇತ ಇ- ಎಫ್ಐಆರ್ ಪ್ರತಿ ಸಿಗಲಿದೆ. ಈ ದೂರು ಆಧರಿಸಿ ಸಂಬಂಧಪಟ್ಟ ಠಾಣೆಯ ಪೊಲೀಸರು ವಾಹನಗಳ ಪತ್ತೆಗೆ ಕ್ರಮ ಕೈಗೊಳ್ಳಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read