ದರ ಕುಸಿತದಿಂದ ಕಂಗಾಲಾದ ರೈತರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ

ಬೆಂಗಳೂರು: ಈರುಳ್ಳಿ ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಕೆಜಿಗೆ 10 ರೂಪಾಯಿ ದರದಲ್ಲಿ ರೈತರೇ ಗಲ್ಲಿ ಗಲ್ಲಿಗಳಿಗೆ ತೆರಳಿ ಚೀಲಗಟ್ಟಲೆ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ಸಂಜೆ ವೇಳೆಗೆ ಕೇಳಿದಷ್ಟು ಬೆಲೆಗೆ ಚೀಲಗಟ್ಟಲೆ ಈರುಳ್ಳಿ ಕೊಟ್ಟು ಹೋಗುತ್ತಿದ್ದಾರೆ.

ಇನ್ನು ಕೆಜಿ ಲೆಕ್ಕಕ್ಕಿಂತ 5 ಕೆಜಿ, 10 ಕೆಜಿಗೆ ಇಷ್ಟು ಎಂದು ಮಾರಾಟ ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ಈರುಳ್ಳಿ 50 ಕೆಜಿ ಚೀಲ ಕೊಪ್ಪಳ ಮಾರುಕಟ್ಟೆಯಲ್ಲಿ 600 ರಿಂದ 700 ಮಾರಾಟವಾಗುತ್ತಿದೆ. ಕೆಲವೊಮ್ಮೆ ಒಂದು ಸಾವಿರ ರೂಪಾಯಿವರೆಗೂ ಮಾರಾಟವಾಗುತ್ತಿದೆ. ಗುಣಮಟ್ಟ ಕಡಿಮೆ ಇರುವ ಈರುಳ್ಳಿ ಚೀಲಕ್ಕೆ 500 ರೂಪಾಯಿಗೆ ಮಾರಾಟವಾಗುತ್ತಿದ್ದು, ಈರುಳ್ಳಿ ಬೆಳೆದ ರೈತರಿಗೆ ಸಂಕಷ್ಟ ಎದುರಾಗಿದೆ.

ಕೊಪ್ಪಳ ಮಾರುಕಟ್ಟೆ ಸೇರಿದಂತೆ ರಾಜ್ಯಾದ್ಯಂತ ಈರುಳ್ಳಿ ದರ ಕುಸಿತ ಕಂಡಿದೆ. ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಮಾಡಿರುವುದು ಮತ್ತು ಮಾರುಕಟ್ಟೆಗೆ ದಾಸ್ತಾನು ಮಾಡಿದ ಈರುಳ್ಳಿ ಬಿಡುಗಡೆ ಮಾಡಿರುವುದೇ ದರಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೇಡಿಕೆ ಇದೆ. ಆದರೆ ರಫ್ತಿಗೆ ಅವಕಾಶ ನೀಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದೆ. ಈ ವರ್ಷ ಉತ್ತಮ ಧಾರಣೆ ನಿರೀಕ್ಷೆಯಲ್ಲಿದ್ದ ಈರುಳ್ಳಿ ಬೆಳೆದ ರೈತರಿಗೆ ದರ ಕುಸಿತದಿಂದ ತೀವ್ರ ಸಂಕಷ್ಟ ಎದುರಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read