ಒಂದೇ ಹುಡುಗಿಗೆ 6 ಬಾಯ್‌ಫ್ರೆಂಡ್‌ ; ಢಾಕಾದಲ್ಲಿ ಬಯಲಾಯ್ತು ಸೀಕ್ರೆಟ್ ಡೇಟಿಂಗ್ | Viral Video

ಕದ್ದುಮುಚ್ಚಿ ಆರು ಮಂದಿ ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದ ಯುವತಿಯೊಬ್ಬಳ ಕಥೆ, ಢಾಕಾದಲ್ಲಿ ನಡೆದ ಅಚ್ಚರಿಯ ಘಟನೆಯ ಮೂಲಕ ಬಯಲಾಗಿದೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ ಮತ್ತು ಆಧುನಿಕ ಸಂಬಂಧಗಳ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಘಟನೆ ನಡೆದಿದ್ದು ಹೀಗೆ: ಆ ಯುವತಿ ಒಂದೇ ಸಮಯದಲ್ಲಿ ಆರು ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದಳು. ಆದರೆ, ಅವರಲ್ಲಿ ಒಬ್ಬನಿಗೆ ಈ ಸತ್ಯ ತಿಳಿದುಬಂದಿದೆ. ಆತ ತನ್ನ ‘ಪ್ರೇಯಸಿ’ಯಿಗೆ ಪಾಠ ಕಲಿಸಲು ನಿರ್ಧರಿಸಿದ್ದಾನೆ. ಎಲ್ಲ ಐವರು ಪ್ರಿಯಕರರನ್ನು ಒಂದೇ ಜಾಗಕ್ಕೆ, ಅಂದರೆ ಒಂದು ಕೆಫೆಗೆ ಆಹ್ವಾನಿಸಿದ್ದಾನೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿ ಕೆಫೆಯಲ್ಲಿ ಕುಳಿತಿದ್ದು, ಆಕೆಗೆ ಒಬ್ಬ ಯುವಕ ಕಣ್ಣಿಗೆ ಬಟ್ಟೆ ಕಟ್ಟಿದ್ದಾನೆ. ಕಣ್ಣು ಬಿಚ್ಚಿದಾಗ ಆಕೆಗೆ ಎದುರಾಗಿದ್ದು ಭಾರಿ ಆಘಾತ! ಸುತ್ತಲೂ ನಿಂತಿದ್ದವರು ಬೇರೆ ಯಾರೂ ಅಲ್ಲ, ಆಕೆಯೇ ಕದ್ದು ಡೇಟಿಂಗ್ ಮಾಡುತ್ತಿದ್ದ ಉಳಿದ ಐವರು ಪ್ರಿಯಕರರು. ತಮ್ಮ ಸತ್ಯ ಬಯಲಾದ ಕೂಡಲೇ ಯುವತಿಯ ಮುಖ ಕೆಂಪಾಗಿದ್ದು, ಆಕೆ ದಿಗ್ಭ್ರಮೆಗೊಂಡಿದ್ದಾಳೆ.

ಕೆಲಕಾಲ ಮೌನವಾಗಿ ಕುಳಿತಿದ್ದ ಯುವತಿ ನಂತರ ಕಣ್ಣೀರಿಡಲು ಪ್ರಾರಂಭಿಸಿದ್ದಾಳೆ. ಬಳಿಕ ಕೋಪದಿಂದ ಮೇಜಿನ ಮೇಲೆ ಕೈ ಬಡಿದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಒಬ್ಬೊಬ್ಬರಾಗಿ ಆಕೆಯ ಪ್ರಿಯಕರರು ಪ್ರಶ್ನೆಗಳನ್ನು ಕೇಳಲಾರಂಭಿಸಿದಾಗ, ಆಕೆ ಮತ್ತಷ್ಟು ಆಶ್ಚರ್ಯಚಕಿತಳಾಗಿ, ಏನು ಮಾಡಬೇಕೆಂದು ತೋಚದೆ ಸ್ಥಬ್ದಳಾಗಿ ನಿಂತಿದ್ದಾಳೆ.

ಒಂದೇ ಸಮಯದಲ್ಲಿ ಆರು ಮಂದಿಗೆ ಮೋಸ ಮಾಡುತ್ತಿದ್ದ ಈ ಯುವತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಆಧುನಿಕ ಪ್ರೀತಿ-ಪ್ರೇಮ, ಸಂಬಂಧಗಳಲ್ಲಿನ ನಂಬಿಕೆ ಮತ್ತು ಮೋಸದ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ನಿಜವಾಗಿಯೂ ಆಧುನಿಕ ಡೇಟಿಂಗ್ ಜಗತ್ತಿನ ವಿಚಿತ್ರ ತಿರುವುಗಳನ್ನು ಎತ್ತಿ ತೋರಿಸಿದೆ.


Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read