ದೆಹಲಿ ಮೆಟ್ರೋದಲ್ಲಿ ಯುವಜೋಡಿ ಕಿಸ್ಸಿಂಗ್ ವಿಡಿಯೋ ವೈರಲ್; ಪ್ರಯಾಣಿಕರಿಗೆ ಮೆಟ್ರೋ ನಿಗಮದಿಂದ ಹೊಸ ಮಾರ್ಗಸೂಚಿ

ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತು ಯುವಜೋಡಿ ಪರಸ್ಪರ ಚುಂಬಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ದೆಹಲಿ ಮೆಟ್ರೋ ರೈಲು ನಿಗಮವು ತನ್ನ ಪ್ರಯಾಣಿಕರಿಗೆ ಕೆಲ ಸೂಚನೆಗಳನ್ನು ನೀಡಿದೆ.

“ಇಂತಹ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ತಡೆಯಿರಿ” ಎಂದು ಮನವಿ ಮಾಡಿದೆ. ಮೆಟ್ರೋ ಅಧಿಕಾರಿಗಳು ಇಂತಹ ಘಟನೆಗಳನ್ನು ಸಮೀಪದ ಲಭ್ಯವಿರುವ ಮೆಟ್ರೋ ಸಿಬ್ಬಂದಿ / CISF ಗೆ ತಕ್ಷಣ ತಿಳಿಸಲು ಪ್ರಯಾಣಿಕರಿಗೆ ವಿನಂತಿಸಿದ್ದಾರೆ. ತಕ್ಷಣವೇ ಹೀಗೆ ಮಾಡುವುದರಿಂದ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.

ಇತ್ತೀಚಿಗೆ ಮೆಟ್ರೋ ಕೋಚ್‌ನ ನೆಲದ ಮೇಲೆ ಕುಳಿತು ಯುವ ಜೋಡಿ ಪರಸ್ಪರ ಚುಂಬಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದವರು ಇಂತವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮೆಟ್ರೋ ರೈಲು ನಿಗಮವನ್ನ ಒತ್ತಾಯಿಸಿದ್ದರು.

ಕಳೆದ ಕೆಲವು ತಿಂಗಳುಗಳಲ್ಲಿ ದೆಹಲಿ ಮೆಟ್ರೋ ಕೋಚ್‌ಗಳಲ್ಲಿ ಚಿತ್ರೀಕರಿಸಲಾದ ಅನೇಕ ವೀಡಿಯೊಗಳು ವೈರಲ್ ಆಗಿವೆ.

ಏತನ್ಮಧ್ಯೆ ಡಿಎಂಆರ್‌ಸಿ ಹೇಳಿಕೆಯಲ್ಲಿ, “ದೆಹಲಿ ಮೆಟ್ರೋವನ್ನು ಬಳಸುವಾಗ ತನ್ನ ಪ್ರಯಾಣಿಕರು ಜವಾಬ್ದಾರಿಯುತವಾಗಿ ವರ್ತಿಸಬೇಕು ಮತ್ತು ಸಮಾಜದಲ್ಲಿ ಸ್ವೀಕಾರಾರ್ಹವಾಗಿರುವ ಎಲ್ಲಾ ಸಾಮಾಜಿಕ ಶಿಷ್ಟಾಚಾರ ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂದು ನಿರೀಕ್ಷಿಸುತ್ತದೆ” ಎಂದು ಹೇಳಿದೆ.

“ಪ್ರಯಾಣಿಕರು ಯಾವುದೇ ಅಸಭ್ಯ/ಅಶ್ಲೀಲ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು, ಅದು ಇತರ ಸಹ ಪ್ರಯಾಣಿಕರ ಸಂವೇದನೆಯನ್ನು ಕೆರಳಿಸಬಹುದು. DMRC ಯ ಕಾರ್ಯಾಚರಣೆಗಳು ಮತ್ತು ನಿರ್ವಹಣೆ ಕಾಯಿದೆಯು ವಾಸ್ತವವಾಗಿ ಸೆಕ್ಷನ್ 59 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಂದು ಪಟ್ಟಿಮಾಡುತ್ತದೆ” ಎಂದು ಅದು ಹೇಳಿದೆ.

https://twitter.com/youthchallenge9/status/1656166865029455872

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read