ರಾಮನವಮಿ ಪ್ರಯುಕ್ತ ನಾಳೆ ಬೆಂಗಳೂರಲ್ಲಿ ಪ್ರಾಣಿ ವಧೆ , ಮಾಂಸ ಮಾರಾಟ ನಿಷೇಧ-BBMP ಆದೇಶ

ಬೆಂಗಳೂರು :  ರಾಮನವಮಿ  ಪ್ರಯುಕ್ತ ನಾಳೆ ಬೆಂಗಳೂರಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ ಮಾಡಿ ಬಿಬಿಎಂಪಿ ಆದೇಶ ಹೊರಡಿಸಿದೆ.

ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು,   ರಾವನವಮಿ ಪ್ರಯುಕ್ತ ನಾಳೆ ಬೆಂಗಳೂರಲ್ಲಿ ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಪ್ರತಿ ವರ್ಷ ಚೈತ್ರ ಮಾಸದ ಒಂಬತ್ತನೇ ದಿನದಂದು ರಾಮನವಮಿಯನ್ನು ಆಚರಿಸಲಾಗುತ್ತದೆ. ಈ ದಿನ ಭಗವಾನ್ ಶ್ರೀ ರಾಮಚ೦ದ್ರನ ಜನ್ಮದಿನವನ್ನು ಆಚರಿಸುವುದಲ್ಲದೇ, ರಾಮ ಹಾಗೂ ಸೀತೆಯರ ವಿವಾಹದ ದಿನವನ್ನಾಗಿಯೂ ಆಚರಿಸಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read