Viral Video: ಕ್ರೀಡಾಂಗಣದಲ್ಲಿ ಮೊಳಗಿದ ‘ರಾಮ್ ಸಿಯಾ ರಾಮ್’ ಹಾಡು; ಬಿಲ್ಲು ಹೂಡಿದಂತೆ ನಟಿಸಿ ಭಕ್ತಿಯಿಂದ ಕೈಮುಗಿದ ವಿರಾಟ್ ಕೊಹ್ಲಿ…!

ಜನವರಿ 22ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ‘ರಾಮಲಲ್ಲಾ ಪ್ರಾಣಪ್ರತಿಷ್ಠೆ’ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಅದ್ದೂರಿ ಸಿದ್ದತೆಗಳು ನಡೆದಿವೆ. ದೇಶದಾದ್ಯಂತ ಮಾತ್ರವಲ್ಲದೇ ವಿದೇಶಗಳಲ್ಲೂ ಕೂಡ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ರಾಮಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

ಇದರ ಮಧ್ಯೆ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯವನ್ನು ಆಡಲು ತೆರಳಿರುವ ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಕ್ರೀಡಾಂಗಣದಲ್ಲಿ ತಮ್ಮ ರಾಮ ಭಕ್ತಿಯನ್ನು ಮೆರೆದಿದ್ದು, ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಎರಡನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಭಕ್ತಿ ಗೀತೆ ‘ರಾಮ್ ಸಿಯಾ ರಾಮ್’ ಮೊಳಗಿದೆ. ಈ ಹಾಡು ಕೇಳುತ್ತಿದ್ದಂತೆ ಭಕ್ತಿ ಪರವಶರಾದ ವಿರಾಟ್ ಕೊಹ್ಲಿ, ಬಿಲ್ಲು ಹೂಡಿದಂತೆ ಅಭಿನಯಿಸಿ ಕೈಮುಗಿದಿದ್ದಾರೆ. ಈ ವಿಡಿಯೋವನ್ನು ಈಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read