Watch Video | ತುಂಬಿದ ತರಗತಿಯಲ್ಲಿ ವಿದ್ಯಾರ್ಥಿಗೆ ಅವಮಾನ ಮಾಡಿದ ಪ್ರಾಧ್ಯಾಪಕ

ತುಂಬಿದ ತರಗತಿಯಲ್ಲಿ ತಮ್ಮ ವಿದ್ಯಾರ್ಥಿಯೊಬ್ಬನನ್ನು ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಅವಮಾನ ಮಾಡಿದ ವಿಡಿಯೋವೊಂದು ವೈರಲ್‌ ಆಗಿದೆ.

ತಾನು ಕೊಟ್ಟ ಶಿಕ್ಷೆಯನ್ನು ಸರಿಯಾಗಿ ಪಾಲಿಸಲಿಲ್ಲ ಎಂಬ ಕಾರಣಕ್ಕೆ ಸಿಟ್ಟುಗೊಂಡ ಪ್ರಾಧ್ಯಾಪಕ ವಿದ್ಯಾರ್ಥಿಯೊಂದಿಗೆ ಇನ್ನಷ್ಟು ಕೆಟ್ಟದಾಗಿ ನಡೆದುಕೊಂಡಿದ್ದನ್ನು ತರಗತಿಯಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿ ವಿಡಿಯೋ ಮಾಡಿಕೊಂಡಿದ್ದು, ಎನ್‌ಎಸ್‌ಯುಐನ ಅಧಿಕೃತ ಟ್ವಿಟರ್‌ ಪೇಜ್‌ನಲ್ಲಿ ಶೇರ್‌ ಮಾಡಿದ್ದಾರೆ.

“ತಮ್ಮ ಅಸಭ್ಯ ಭಾಷೆ ಹಾಗೂ ಜಾತಿ ನಿಂದನಾತ್ಮಕ ಮಾತುಗಳ ಮೂಲಕ ವಿದ್ಯಾರ್ಥಿಯನ್ನು ಹೆದರಿಸಿ, ಆತನ ಭವಿಷ್ಯವನ್ನು ಹಾಳು ಮಾಡುವುದಾಗಿ ಬೆದರಿಸುತ್ತಿರುವ ಇವರು ಅರುಣ್ ಕುಮಾರ್‌, ಅಲಹಾಬಾದ್‌ ವಿವಿಯ ವಾಣಿಜ್ಯ ಶಾಸ್ತ್ರದ ಪ್ರಾಧ್ಯಾಪಕ. ಅಚ್ಚರಿಯ ಸಂಗತಿ ಎಂದರೆ ವಿಶ್ವವಿದ್ಯಾಲಯದ ಆಡಳಿತವು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು,” ಎಂದು ಎನ್‌ಎಸ್‌ಯುಐ ಟ್ವೀಟ್ ಮೂಲಕ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read