ಪುಣೆಯಲ್ಲಿ ಜಿ-20 ಸಮ್ಮೇಳನಕ್ಕೆ ಕ್ಷಣಗಣನೆ ಶುರುವಾಗಿದ್ದು ನಗರವನ್ನ ಸ್ವಚ್ಛವಾಗಿಡುವ ಪ್ರಕ್ರಿಯೆಯಲ್ಲಿ ರಸ್ತೆಯಲ್ಲಿ ತಾನು ಉಗುಳಿದ್ದ ಉಗುಳನ್ನ ಆತನಿಂದ್ಲೇ ಸ್ವಚ್ಛಗೊಳಿಸಲಾಗಿದೆ. ಈ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.
ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಉಗುಳನ್ನ ಸ್ವಚ್ಛಗೊಳಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಅಧಿಕಾರಿಯೊಬ್ಬರು ಆತನ ಪಕ್ಕದಲ್ಲಿ ನಿಂತಿದ್ದಾರೆ. PMC ಅಧಿಕಾರಿಗಳ ಈ ಕ್ರಮವು G-20 ಈವೆಂಟ್‌ಗೆ ಮುಂಚಿತವಾಗಿ ತೆಗೆದುಕೊಂಡ ನಗರ ಸುಂದರೀಕರಣ ಕ್ರಮಗಳ ಫಲಿತಾಂಶವಾಗಿದೆ.
ಪರಿಷದ್ ಮತ್ತು ಸ್ವಚ್ಛ ಸರ್ವೇಕ್ಷಣಾ 2023 ರ ಹಿನ್ನೆಲೆಯಲ್ಲಿ ನಗರದ ಮುಖ್ಯ ರಸ್ತೆಗಳು, ಫುಟ್‌ಪಾತ್‌ಗಳು ಮತ್ತು ವಿಭಜಕಗಳಲ್ಲಿ ಉಗುಳುವ ನಾಗರಿಕರ ವಿರುದ್ಧ ದಂಡದ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಅಡಿಯಲ್ಲಿ ಪುಣೆ ವಿಶ್ವವಿದ್ಯಾಲಯ ರಸ್ತೆಯಲ್ಲಿ ನಾಗರಿಕರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ, ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ವ್ಯಕ್ತಿಯ ಉಗುಳಿದ ಕೊಳೆಯನ್ನ ಅವನಿಂದಲೇ ಸ್ವಚ್ಛಗೊಳಿಸಿಲಾಗಿದೆ ಎಂದು ತಿಳಿಸಿದೆ.
ಸಮ್ಮೇಳನದ ಸಿದ್ಧತೆಯಾಗಿ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸುತ್ತಿದೆ. ಆದರೆ ನಾಗರಿಕರು ಗೋಡೆಯ ಚಿತ್ರಗಳು ಮತ್ತು ಸುಂದರ ಸ್ಥಳಗಳ ಮೇಲೆ ಉಗುಳುವುದು ವರದಿಯಾಗಿದೆ. ಈ ಸಮಸ್ಯೆ ನಿವಾರಣೆಗೆ ಎಲ್ಲ ವಾರ್ಡ್ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಿ ಕ್ರಮ ಕೈಗೊಂಡು ದಂಡ ವಿಧಿಸಲಾಗಿದೆ.
ಜನವರಿ 12 ರವರೆಗೆ ಒಟ್ಟು 123 ಪ್ರಕರಣಗಳನ್ನು ದಾಖಲಿಸಿದ್ದು1,23,000 ರೂ. ದಂಡದ ಮೊತ್ತ ಕಟ್ಟಿಸಿಕೊಳ್ಳಲಾಗಿದೆ. ದಂಡ ಪಾವತಿಸಲು ಸಾಧ್ಯವಾಗದ ನಾಗರಿಕರಿಗೆ ತಮ್ಮ ಉಗುಳನ್ನು ಸ್ವಚ್ಛಗೊಳಿಸುವ ಶಿಕ್ಷೆಯನ್ನು ನೀಡಲಾಗುತ್ತದೆ. ನಗರದ ಸಾರ್ವಜನಿಕ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡುವ ಸಲುವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಲವಿಸರ್ಜನೆ ಅಥವಾ ಉಗುಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು PMC ನಾಗರಿಕರಿಗೆ ನೆನಪಿಸುತ್ತಿದೆ.
2023 ರ ಜನವರಿ 16 ಮತ್ತು 17 ರಂದು ಪುಣೆ ನಗರದಲ್ಲಿ ಜಿ-20 ಸಮ್ಮೇಳನ ನಡೆಯಲಿದೆ. ಸುಮಾರು 35 ದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
https://twitter.com/TimesNow/status/1614217654096519170?ref_src=twsrc%5Etfw%7Ctwcamp%5Etweetembed%7Ctwterm%5E1614217654096519170%7Ctwgr%5E2ab5bc97d763dfb90866427078bcab9cabd824e8%7Ctwcon%5Es1_&ref_url=https%3A%2F%2Fwww.timesnownews.com%2Fmirror-now%2Fin-focus%2Fyou-spit-you-clean-man-asked-to-clean-pune-university-road-by-corporation-as-punishment-for-careless-spitting-watch-article-96992138