ಕೋತಿ ಕುತ್ತಿಗೆಗೆ ಹಗ್ಗ ಕಟ್ಟಿ ಚಿತ್ರಹಿಂಸೆ ಕೊಟ್ಟ ಪಾಪಿ: ವಿಡಿಯೋ ವೈರಲ್​ ಆಗ್ತಿದ್ದಂತೆಯೇ ಅರೆಸ್ಟ್

ಮೂವರು ದುಷ್ಕರ್ಮಿಗಳು ಕೋತಿಯ ಕುತ್ತಿಗೆಗೆ ಹಗ್ಗ ಕಟ್ಟಿ ಎಳೆದಾಡುತ್ತಿರುವ ಆಘಾತಕಾರಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದ ಘಟನೆಯ ದೃಶ್ಯಾವಳಿ ಆಗಿದೆ ಎನ್ನಲಾಗಿದೆ. ಮೂವರ ದುಷ್ಕೃತ್ಯದಿಂದಾಗಿ ಕೋತಿ ಸಾವನ್ನಪ್ಪಿದೆ. ಈ ಸಂಬಂಧ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ಹೊರಹಾಕ್ತಿದ್ದಾರೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು ಮೂವರೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಗುಲಾವತಿ ಪೊಲೀಸ್​ ಠಾಣಾ ವ್ಯಾಪ್ತಿಯ ರಾಮನಗರ ನಿವಾಸಿ ನಿತಿನ್​ ಕುಮಾರ್​​ ಸಿಕಂದರಾಬಾದ್​ ರಸ್ತೆಯಲ್ಲಿರೋ ಕಾರ್ಖಾನೆಯಲ್ಲಿ 2 ದಿನಗಳ ಹಿಂದೆ ನಡೆದ ಭೀಕರ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಗಾಂವ್​ಭಮ್ರಾ ನಿವಾಸಿ ಅಕಿಲ್​ ಎಂಬಾತ ತನ್ನ ಸಹಚರರಾದ ಮೌಡಿ ಹಾಪುರದ ನಾಸಿರ್​ ಹಾಗೂ ಬದ್ಕಲ್​ ಠಾಣಾ ಫೈಸಲ್​ ಜೊತೆಗೆ ಕಾರ್ಖಾನೆ ಆವರಣದ ಹೊರಗೆ ಮಂಗದ ಕುತ್ತಿಗೆಗೆ ಹಗ್ಗ ಹಾಕಿ ಎಳೆದಾಡಿದ್ದಾರೆ. ಇದನ್ನು ಕುಮಾರ್​ ವೀಕ್ಷಿಸಿದ್ದರು.

ಆರೋಪಿ ಅಕಿಲ್​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್​ಲೋಡ್​ ಮಾಡಿದ್ದ ಎನ್ನಲಾಗಿದೆ. ಅಲ್ಲದೇ ಮತ್ತೊಬ್ಬ ಆರೋಪಿ ಈ ವಿಡಿಯೋವನ್ನ ಶೇರ್​ ಮಾಡಿದ್ದಾನೆ. ಈ ಸಂಬಂಧ ಗುಳಾವತಿ ಠಾಣೆಯ ಪೊಲೀಸರು ಆರೋಪಿಗಳಾದ ಅಕಿಲ್, ನಾಸಿರ್ ಮತ್ತು ಫೈಸಲ್ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read