ಹಾಡಹಗಲೇ ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ; ಬೆಚ್ಚಿಬೀಳಿಸುವಂತಿದೆ ಸಿಸಿ ಟಿವಿ ದೃಶ್ಯಾವಳಿ

ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಮಥುರಾದಲ್ಲಿ ಸಂಭವಿಸಿದೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಸಿಸಿ ಟಿವಿ ದೃಶ್ಯಾವಳಿಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿದೆ. ಇನ್ನು ಈ ಕಾಮುಕ ಶಿಕ್ಷಕನನ್ನು ಗೋವಿಂದ್​ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಈತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿರೋದನ್ನು ಕಾಣಬಹುದಾಗಿದೆ.

ವರದಿಗಳ ಪ್ರಕಾರ ಸಂತ್ರಸ್ತೆ ತನಗೆ ಕಿರುಕುಳ ನೀಡಿದ ಶಿಕ್ಷಕನ ವಿರುದ್ಧ ಆರೋಪ ಮಾಡಿದ್ದಾಳೆ ಎನ್ನಲಾಗಿದೆ. ನಾನು ಈ ಘಟನೆ ಬಗ್ಗೆ ದೂರು ನೀಡಲು ಹೋಗಿದ್ದಕ್ಕೆ ಶಿಕ್ಷಕ ನನಗೆ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಶಾಲೆ ಮುಗಿದ ಬಳಿಕ ಮನೆಗೆ ಹೋಗಬೇಡ ಇಲ್ಲೇ ಇರು ಎಂದು ಶಿಕ್ಷಕ ಗೋವಿಂದ್​ ಹೇಳಿದ್ದು, ಬಳಿಕ ಲೈಂಗಿಕ ಕಿರುಕುಳ ನೀಡಿದ್ದಾನೆ.

ವಿದ್ಯಾರ್ಥಿಯು ಸ್ಥಳೀಯ ಪೊಲೀಸ್​ ಠಾಣೆಗೆ ತೆರಳಿ ಆರೋಪಿ ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಶಿಕ್ಷಕನನ್ನು ಗೋವಿಂದ್ ಎಂದು ಗುರುತಿಸಲಾಗಿದೆ. ಈತನ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕೋಸಿಕಲನ್​ ಪ್ರದೇಶದಲ್ಲಿರುವ ಪ್ರೌಢಶಾಲೆಯಲ್ಲಿ ಈ ಘಟನೆ ಸಂಭವಿಸಿದೆ ಅಂತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಗೋವಿಂದ್​ ತಲೆಮರೆಸಿಕೊಂಡಿದ್ದಾನೆ.

https://twitter.com/i/status/1722196883551277302

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read