ತನ್ನ 9 ವರ್ಷದ ಮಗನನ್ನು ಕಾಣಲು ರಸ್ತೆ ದಾಟುತ್ತಿದ್ದ ತಾಯಿಯೊಬ್ಬರಿಗೆ ಮಿನಿ ಟ್ರಕ್ ಒಂದು ಗುದ್ದಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಹೈದರಾಬಾದ್‌ನಲ್ಲಿ ಜರುಗಿದೆ.
ಭಾಗ್ಯನಗರದ ಶಹೀನ್ ನಗರ ಪ್ರದೇಶದ ನಿವಾಸಿ ಪರ್ವೀನ್ ಬೇಗಂ, 35, ಇಲ್ಲಿನ ಬಾಲಾಪುರದಲ್ಲಿರುವ ಅಲ್ಫಾಲಾಹ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಪುತ್ರನ ಭೇಟಿ ಮಾಡಲು ರಸ್ತೆ ದಾಟುತ್ತಿದ್ದ ವೇಳೆ ಟ್ರಾಲಿ ಚಾಲಕನೊಬ್ಬನ ನಿರ್ಲಕ್ಷ್ಯದಿಂದಾಗಿ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ಸಬಾ ಖಾನ್ ಎಂಬ ಮಹಿಳೆ ಟ್ವೀಟ್ ಮಾಡಿದ್ದಾರೆ.
ಮಿನಿ ಟ್ರಕ್ ಢಿಕ್ಕಿ ಹೊಡೆದ ರಭಸಕ್ಕೆ ಪರ್ವೀನ್ ದೇಹವು ಗಾಳಿಯಲ್ಲಿ ಹಾರಿ ನೆಲಕ್ಕಪ್ಪಳಿಸಿದೆ.
ತಮ್ಮ ಪುತ್ರ ಮೊಹಮ್ಮದ್ ವಜ಼ೀರ್‌ಗೆ ಟಿಫಿನ್ ಬಾಕ್ಸ್ ಕೊಡಲು ತೆರಳುತ್ತಿದ್ದ ಪರ್ವೀನ್‌ಗೆ ಈ ಅಪಘಾತ ಸಂಭವಿಸಿದೆ. ಚಾಲಕನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.
https://twitter.com/ItsKhan_Saba/status/1640616525387399170?ref_src=twsrc%5Etfw%7Ctwcamp%5Etweetembed%7Ctwterm%5E1640616525387399170%7Ctwgr%5Efe1a5fa310a248d0ae965b169057d26b2ff9a0dc%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fon-camera-hyderabad-mother-on-way-to-meet-9-year-old-son-dies-after-dramatically-getting-hit-by-mini-truck