ನಾಯಿಮರಿಗಳಿಗೆ ಆಹಾರ ನೀಡಲು ಹೋದ ಮಹಿಳೆ ಮೇಲೆ ತಂದೆ-ಮಗ ಹಲ್ಲೆ

ಗ್ರೇಟರ್ ನೋಯ್ಡಾದ ಗೌತಮ್ ಬುದ್ಧನಗರದ ಮಹಿಳೆಯೊಬ್ಬರು ನಾಯಿಯ ನವಜಾತ ನಾಯಿಮರಿಗಳಿಗೆ ಆಹಾರವನ್ನು ನೀಡಲು ಹೋದಾಗ, ಕೆಲವು ನೆರೆಹೊರೆಯವರು ಅವರನ್ನು ಥಳಿಸಲು ಆಕೆಯ ಮನೆಗೆ ನುಗ್ಗಿದ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್‌ ಆಗಿದೆ.

ಮಹಿಳೆಯ ಮೇಲೆ ತಂದೆ-ಮಗ ಇಬ್ಬರು ದಾಳಿ ಮಾಡಿದ ಘಟನೆ ಇದಾಗಿದೆ. ನಾಯಿ ಮರಿಗಳಿಗೆ ಆಹಾರ ನೀಡಿದ್ದಕ್ಕಾಗಿ ಅಕ್ಕಪಕ್ಕದ ಮನೆಯವರಿಬ್ಬರು ಮಹಿಳೆಯ ಮನೆಗೆ ನುಗ್ಗಿ ಥಳಿಸಿದ್ದಾರೆ ಎನ್ನಲಾಗಿದೆ. ಕಳೆದ ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಗ್ರೇಟರ್ ನೋಯ್ಡಾ ಬೀಟಾ 2 ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯನ್ನು 45 ವರ್ಷದ ಕಾಮಿನಿ ಸಕ್ಸೇನಾ ಎಂದು ಗುರುತಿಸಲಾಗಿದೆ.

ವೀಡಿಯೊ ವೈರಲ್ ಆದ ನಂತರ, ಪೊಲೀಸರು ಘಟನೆಯನ್ನು ಗಮನಿಸಿ ಇಬ್ಬರನ್ನು ಬಂಧಿಸಿದ್ದಾರೆ. ಒಬ್ಬನನ್ನು ಕಾಂತ ಪ್ರಸಾದ್ ಎಂದು ಗುರುತಿಸಲಾಗಿದೆ. ಸದ್ಯ ಯಾವುದೇ ವ್ಯಕ್ತಿಗಳಿಂದ ಲಿಖಿತ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

https://twitter.com/jp_s_journalist/status/1632233363263344641?ref_src=twsrc%5Etfw%7Ctwcamp%5Etweetembed%7Ctwterm%5E163

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read