ಬಿಹಾರದಿಂದ ಬೆಚ್ಚಿಬೀಳಿಸುವ ವಿಡಿಯೋವೊಂದು ಹೊರಬಿದ್ದಿದ್ದು,ಅದರಲ್ಲಿ ವೃದ್ಧನೊಬ್ಬನನ್ನು ಇಬ್ಬರು ಮಹಿಳಾ ಪೊಲೀಸರು ಥಳಿಸಿದ್ದಾರೆ.
ಪತ್ರಕರ್ತ ಮುಖೇಶ್ ಸಿಂಗ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಜನನಿಬಿಡ ರಸ್ತೆಯಲ್ಲಿ ಇಬ್ಬರು ಮಹಿಳಾ ಪೊಲೀಸರು ವೃದ್ಧನನ್ನು ಥಳಿಸಿದ್ದಾರೆ. ವೃದ್ಧರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಮಹಿಳಾ ಪೊಲೀಸರು ಪದೇ ಪದೇ ಲಾಠಿಯಿಂದ ಹೊಡೆದಿದ್ದಾರೆ.
ಅಚ್ಚರಿಯೆಂದರೆ ಜನಸಂದಣಿ ಇರುವ ರಸ್ತೆಯಾಗಿದ್ದರೂ, ಯಾರೊಬ್ಬರೂ ಪೊಲೀಸರ ದಾಳಿಯನ್ನು ತಡೆಯಲು ಅಥವಾ ವೃದ್ಧನಿಗೆ ಸಹಾಯ ಮಾಡಲು ಮುಂದಾಗಲಿಲ್ಲ. ಜನರು ಆ ದೃಶ್ಯವನ್ನು ನೋಡುತ್ತಾ ನಿಶ್ಚಿಂತೆಯಿಂದ ಹಾದು ಹೋಗುತ್ತಿರುವುದು ಕಂಡುಬರುತ್ತದೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಘಾತಕಾರಿ ಘಟನೆಯನ್ನು ಹಂಚಿಕೊಂಡ ಸಿಂಗ್ ಅವರು “ಈ ಇಬ್ಬರು ಮಹಿಳಾ ಪೊಲೀಸರು ಹೊಡೆಯುತ್ತಿರುವ ಮುದುಕನ ಹೆಸರು ಪಾಂಡೆ. ಕಳೆದ ಹಲವು ದಶಕಗಳಿಂದ ಕೈಮೂರ್‌ನ ಖಾಸಗಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾರೆ.ಅವನ ಏಕೈಕ ತಪ್ಪೆಂದರೆ ಅವರು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಕೆಳಗೆ ಬಿದ್ದರು. ಅವರು ಎದ್ದೇಳಲು ಸ್ವಲ್ಪ ಸಮಯ ತೆಗೆದುಕೊಂಡರು” ಎಂದಿದ್ದಾರೆ.
https://twitter.com/Mukesh_Journo/status/1616634771102388225?ref_src=twsrc%5Etfw%7Ctwcamp%5Etweetembed%7Ctwterm%5E1616634771102388225%7Ctwgr%5Ed4aa25e28fd332919d6180c02c478b7279e96d55%7Ctwcon%5Es1_&ref_url=https%3A%2F%2Fwww.freepressjournal.in%2Findia%2Fon-camera-bihar-police-women-thrash-elderly-man-on-road-shocking-video-surfaces