ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ನಡೆದಿರುವ ಘಟನೆಯೊಂದು ಆಘಾತ ತರಿಸುವಂತಿದೆ. ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಹುಡುಗಿಯೊಬ್ಬಳು ತನ್ನ ಸಂಗಾತಿಯನ್ನು ಅಪ್ಪಿಕೊಂಡು ಮುದ್ದಾಡಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಕೂಟರ್ ಚಾಲನೆ ಮಾಡುತ್ತಿದ್ದವರ ವಿರುದ್ಧ ದಿಕ್ಕಿನಲ್ಲಿ ಕುಳಿತಿರುವ ಹುಡುಗಿ ಎರಡು ಕಾಲುಗಳಿಂದ ಬ್ಯಾಲೆನ್ಸ್ ಕಾದುಕೊಂಡಿದ್ದಾಳೆ. ಜೊತೆಗೆ ಕೈಗಳಿಂದ ಅಪ್ಪಿಕೊಂಡು ಸಂಗಾತಿಯನ್ನು ಮುದ್ದಿಸಿದ್ದಾಳೆ. ಇದನ್ನು ಮತ್ತೊಬ್ಬರು ತಮ್ಮ ವಾಹನದಿಂದ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿದ್ದಾರೆ.
ಹಜರತ್ ಗಂಜ್ ಏರಿಯಾದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಡಿಯೋ ವೈರಲ್ ಆಗುತ್ತಲೆ ತನಿಖೆ ನಡೆಸಿರುವ ಪೊಲೀಸರು ಸ್ಕೂಟರ್ ಚಾಲನೆ ಮಾಡುತ್ತಿದ್ದವರು ಹುಡುಗನಲ್ಲ ಹುಡುಗಿ ಎಂಬುದನ್ನು ಕಂಡುಕೊಂಡಿದ್ದಾರೆ. ಹೀಗಾಗಿ ಈಗ ಇಬ್ಬರು ಹುಡುಗಿಯರ ವಿರುದ್ಧ ಪ್ರಕರಣ ದಾಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
https://twitter.com/Siachaturvedi2/status/1615527360421593088?ref_src=twsrc%5Etfw%7Ctwcamp%5Etweetembed%7Ctwterm%5E1615527360421593088%7Ctwgr%5E45c26d055544ebc7f24c22de764eec190573ce30%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fnews18english-epaper-newseigh%2Foncamyoungstersseenhuggingonmovingscootyinlucknowshazratganjuppoliceprobeunderway-newsid-n463056144%3Fs%3Dauu%3D0x61fbe37283098391ss%3Dwspsm%3DY