ಆಗಸ್ಟ್ 27 ರಂದು ಹೆಚ್.ಡಿ. ದೇವೇಗೌಡ ದಂಪತಿಗಳಿಗೆ ʼಹುಟ್ಟೂರ ಸನ್ಮಾನʼ

ಬೆಂಗಳೂರು: ಭಾರತದ ಮಾಜಿ ಪ್ರಧಾನಿ, ಮೊಟ್ಟ ಮೊದಲ ಕನ್ನಡಿಗ ಪ್ರಧಾನಮಂತ್ರಿ ಹಿರಿಯ ರಾಜಕೀಯ ಮುತ್ಸದಿ ಹೆಚ್.ಡಿ. ದೇವೇಗೌಡ ದಂಪತಿಗಳಿಗೆ “ಹುಟ್ಟೂರ ಸನ್ಮಾನ” ಕಾರ್ಯಕ್ರಮವನ್ನು ಆಗಸ್ಟ್ 27 ರಂದು ಸಂಜೆ 5.00 ಗಂಟೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ಡಾ. ಅಂಬರೀಶ್ ಸಭಾಂಗಣ, ಡಾ. ರಾಜ್‍ಕುಮಾರ್ ಭವನ, ಚಾಮರಾಜಪೇಟೆ ಇಲ್ಲಿ ನಡೆಯಲಿದೆ.

ಈ ಸಮಾರಂಭವನ್ನು ಯು.ಎ.ಇ.ನ ದುಬಾಯಿ ಕನ್ನಡಿಗರ ಕನ್ನಡ ಕೂಟ ಆಯೋಜಿಸಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ. ಕನ್ನಡಿಗರ ಕನ್ನಡ ಕೂಟ ದುಬಾಯಿ ಅಧ್ಯಕ್ಷ ಸಾಧನ್ ದಾಸ್ ಅವರು ಸಭಾಧ್ಯಕ್ಷತೆ ವಹಿಸುವರು.

ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯಪುರ, ಅಭಿಮಾನಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕರಾದ ಟಿ. ವೆಂಕಟೇಶ್, ದುಬಾಯಿನ ಜಾಯಿನ್ ಇಂಟನ್ರ್ಯಾಶನಲ್ ಹೋಟೆಲ್‍ನ ಜಫ್ರುಲ್ಲಾ ಖಾನ್, ಅಮೇರಿಕ ಕನ್ನಡ ಕೂಟಗಳ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಡಾ. ಹಳೆಕೋಟೆ ವಿಶ್ವಾಮಿತ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ದೊಡ್ಡನೆ ವೆಂಕಟೇಶ್, ಮಂಜುನಾಥ್ ಬಂಜಾರಪಾಳ್ಯ, ಸಿ.ಎಂ. ನಾಗರಾಜ್, ದೆಹಲಿ ಕರ್ನಾಟಕ ಸಂಘ, ಪರಮೇಶ್ ಗೌಡ, ಪುಟ್ಟೇಗೌಡ ಸಿ.ಎನ್, ಶಶಿಗೌಡ, ರಾಮಲಿಂಗಯ್ಯ, ಅಮರೇಶ್ ವಿ, ಎ.ಪಿ.ಎಂ ಕಂಪನಿ, ಅಶೋಕ ರಾಮಸಂದ್ರ, ಕನ್ನಡವೇ ಸತ್ಯ ರಂಗಣ್ಣ ಅವರುಗಳ ನೆರವು ಸಹಕಾರದಿಂದ ಈ ಸಮಾರಂಭ ಆಯೋಜಿಸಲಾಗಿದೆ. ರವಿಸಂತು ಮತ್ತು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀಮತಿ ದಿವ್ಯಾ ಆಲೂರು ನಿರೂಪಣೆ ಮಾಡಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read