ಮೀರತ್ : ವ್ಯಕ್ತಿಯೊಬ್ಬ 20 ರೂ.ಗೆ ಬೋಳುತನಕ್ಕೆ ಚಿಕಿತ್ಸೆ ನೀಡುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಈ ಘಟನೆಯ ವೀಡಿಯೊಗಳು ವೈರಲ್ ಆಗಿದ್ದು, ಆನ್ ಲೈನ್ ನಲ್ಲಿ ಟೀಕೆಗೂ ಕಾರಣವಾಗಿದೆ.ಬೋಳು ತಲೆಗೆ 20 ರೂ.ನ ಎಣ್ಣೆ ಹಚ್ಚಿ , ವಿಶೇಷ ಎಣ್ಣೆಯನ್ನು 300 ರೂ.ಗೆ ಮಾರಾಟ ಮಾಡುತ್ತಿದ್ದ ದೆಹಲಿಯ ಅನೀಸ್ ಮಂಡೋಲಾ, ತನ್ನ ಚಿಕಿತ್ಸೆಯು ಕೂದಲನ್ನು ಮತ್ತೆ ಬೆಳೆಸಬಹುದು ಎಂದು ಹೇಳಿಕೊಂಡಿದ್ದಾನೆ.
ಈ ವಿಚಾರ ಜನರ ಕಿವಿಗೆ ಬೀಳುತ್ತಿದ್ದಂತೆ ಜನರ ದಂದೇ ಚಿಕಿತ್ಸೆ ಪಡೆಯಲು ಮುಗಿಬಿದ್ದಿದೆ.
ಜನರು ತಮ್ಮ ಸರದಿಗಾಗಿ ಸರತಿ ಸಾಲಿನಲ್ಲಿ ನಿಂತರು. ಇದರಿಂದಾಗಿ ನಗರದ ಮುಖ್ಯರಸ್ತೆ ಸಂಪೂರ್ಣ ಬಂದ್ ಆಗಿ ಸಂಚಾರ ಸ್ಥಗಿತಗೊಂಡಿದೆ.ದಟ್ಟಣೆಯಿಂದಾಗಿ ಆಂಬ್ಯುಲೆನ್ಸ್ ಕೂಡ ಟ್ರಾಫಿಕ್ ಜಾಮ್’ನಲ್ಲಿ ಸಿಲುಕಿಸಿತು, ಪೊಲೀಸರು ಬಂದು ದಾರಿಯನ್ನು ತೆರವುಗೊಳಿಸಿದರು. ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಈ ವೀಡಿಯೊದಲ್ಲಿ, ಉತ್ಸಾಹಿ ಗ್ರಾಹಕರು ಸಾಲುಗಟ್ಟಿ ನಿಂತು ತಮ್ಮ ಸರದಿಗಾಗಿ ಕಾಯುತ್ತಿರುವುದನ್ನು ತೋರಿಸುತ್ತದೆ. ಅನೇಕರು ತಮ್ಮ ಬೋಳುತನಕ್ಕೆ ಪರಿಹಾರವನ್ನು ಆಶಿಸುತ್ತಾ 300 ರೂ.ಗಳ ಎಣ್ಣೆಯನ್ನು ಖರೀದಿಸಲು ಧಾವಿಸುತ್ತಿರುವುದು ಕಂಡುಬಂದಿದೆ.