OMG: 16 ಸಾವಿರ ಜನರಿಗೆ ವಂಚಿಸಿದ ಮಹಿಳೆಗೆ 1.41 ಲಕ್ಷ ವರ್ಷಗಳ ಸೆರೆವಾಸ….!

ಮೋಸ ಮಾಡಿದವರಿಗೆ ಹೆಚ್ಚೆಂದರೆ ಎಷ್ಟು ಶಿಕ್ಷೆಯಾಗಬಹುದು ? ವಿವಿಧ ದೇಶಗಳ ಕಾನೂನಿನ ಪ್ರಕಾರ 6 ತಿಂಗಳು, ಒಂದು ವರ್ಷ ಅಥವಾ ಜೀವಾವಧಿ ಸಜೆಯಾಗಬಹುದು. ಇದನ್ನು ಬಿಟ್ಟರೆ ಮರಣದಂಡನೆಯೇ ಅತಿ ದೊಡ್ಡ ಶಿಕ್ಷೆ. ಆದರೆ ಹಣಕಾಸಿನ ವಂಚನೆಯ ಆರೋಪದ ಮೇಲೆ 1 ಲಕ್ಷದ 41 ಸಾವಿರದ 78 ವರ್ಷಗಳ ಶಿಕ್ಷೆ ವಿಧಿಸಿರುವುದನ್ನು ಎಂದಾದರೂ ಕೇಳಿದ್ದೀರಾ ? ಇಷ್ಟು ದೀರ್ಘಾವಧಿಯ ಸೆರೆವಾಸ ವಿಚಿತ್ರ ಎನಿಸಬಹುದು. ಆದರೆ ಇದು ನಿಜಸಂಗತಿ.

ಚಮೋಯ್ ಥಿಪ್ಯಾಸೊ ಎಂಬ ಈ ದುಷ್ಟ ಮಹಿಳೆ 16,000 ಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಳು. ಇದಕ್ಕಾಗಿ ಆಕೆಗೆ 1,41,078 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಈ ಮಹಿಳೆ ಸುಮಾರು 16.5 ಶತಕೋಟಿ ರೂಪಾಯಿಗಳನ್ನು ದೋಚಿದ್ದಳು. ಉಳಿತಾಯ ಯೋಜನೆಯ ಹೆಸರಿನಲ್ಲಿ ತಿಪ್ಯಾಸೋ ವಂಚನೆಯ ಸಂಚು ಹೆಣೆದಿದ್ದಳು. ಹಣಕಾಸು ಕಂಪನಿ ಮತ್ತು ಹೂಡಿಕೆ ಯೋಜನೆ ನಡೆಸುವ ಮೂಲಕ ಈಕೆ ಜನರನ್ನು ವಂಚಿಸುತ್ತಿದ್ದಳು.

ಭಾರತದಲ್ಲಿ ಈ ಉಳಿತಾಯ ಯೋಜನೆಗಳನ್ನು ‘ಚಿಟ್ ಫಂಡ್‌ಗಳು’ ಎಂದು ಕರೆಯಲಾಗುತ್ತದೆ. ಭಾರತದೊಂದಿಗೆ ವಂಚಕಿಗೇನು ಸಂಬಂಧ ? ಥಾಯ್ಲೆಂಡ್‌ನ ಚಮೊಯ್ ತಿಪ್ಯಾಸೊಗೆ ನ್ಯಾಯಾಲಯ 1989 ರಲ್ಲಿ ಶಿಕ್ಷೆ ವಿಧಿಸಿದೆ. ಆ ‘ಚಿಟ್ ಫಂಡ್’ ಕಂಪನಿ ಭಾರತದ ಕೇರಳದಲ್ಲೂ ಅನೇಕರಿಗೆ ಮೋಸ ಮಾಡಿದೆ. ಈ ಮಹಿಳೆ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡುವ ಆಮಿಷವೊಡ್ಡಿದ್ದಳು. ಹೂಡಿಕೆಯ ಬದಲಿಗೆ, ಸ್ವಲ್ಪ ಸಮಯದ ನಂತರ ಹೆಚ್ಚಿನ ಆದಾಯ ಬರುವ ಬಾಂಡ್‌ ನೀಡುವುದಾಗಿ ಹೇಳಿದ್ದಳು.

ಹಗರಣ ನಡೆದಿದ್ದು ಹೇಗೆ ?

ತಿಪ್ಯಾಸೊ ಆಗ ಥೈಲ್ಯಾಂಡ್‌ನ ಪೆಟ್ರೋಲಿಯಂ ಅಥಾರಿಟಿ, ಸರ್ಕಾರಿ ತೈಲ ಕಂಪನಿಯ ಉದ್ಯೋಗಿಯಾಗಿದ್ದಳು. ಈ ಕಂಪನಿಯನ್ನು ಈಗ ಪಿಟಿಟಿ ಎಂದು ಕರೆಯಲಾಗುತ್ತದೆ. ಹಗರಣವನ್ನು ಕಾನೂನುಬದ್ಧವಾಗಿ ಕಾಣುವಂತೆ ಮಾಡಲು ಥಿಪ್ಯಾಸೊ ರಾಯಲ್ ಥಾಯ್ ಏರ್ ಫೋರ್ಸ್‌ನಲ್ಲಿ ಸಂಪರ್ಕಗಳನ್ನು ಬಳಸಿದ್ದಳು. ಆಕೆಯನ್ನು ನಂಬಿ ಸಾವಿರಾರು ಜನರು ತಮ್ಮಲ್ಲಿದ್ದ ಹಣವನ್ನೆಲ್ಲ ಹೂಡಿಕೆ ಮಾಡಿದ್ದರು.

1980ರ  ದಶಕದಲ್ಲಿ ಈ ಹಗರಣವನ್ನು ಭೇದಿಸಿದಾಗ, ಚಿಟ್ ಫಂಡ್ ಕಂಪನಿಯನ್ನು ಮುಚ್ಚಲಾಯಿತು ಮತ್ತು ಆರೋಪಿ ಮಹಿಳೆಯನ್ನು ಜೈಲಿಗೆ ಹಾಕಲಾಯಿತು. ಈ ಪ್ರಕರಣದಲ್ಲೇ ಮಹಿಳೆಗೆ ಭಾರೀ ಶಿಕ್ಷೆಯಾಗಿತ್ತು, ಆದರೆ ಕೆಲವೇ ದಿನಗಳಲ್ಲಿ ಆಕೆ ಜೈಲಿನಿಂದ ತಪ್ಪಿಸಿಕೊಂಡಿದ್ದರಿಂದ ಸಂತ್ರಸ್ಥರಿಗೆ ನ್ಯಾಯ ದೊರಕಲೇ ಇಲ್ಲ. ನಂತರ ವಂಚನೆಯ ಪ್ರಕರಣದಲ್ಲಿ ಗರಿಷ್ಠ ಇಪ್ಪತ್ತು ವರ್ಷಗಳ ಶಿಕ್ಷೆಯ ನಿಬಂಧನೆ ಇರುವ ಕಾನೂನನ್ನು ಅಂಗೀಕರಿಸಲಾಯಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read