ಚಳಿಗಾಲದಲ್ಲಿ ಚರ್ಮದ ಸಮಸ್ಯೆಗೆ ಬೆಸ್ಟ್ ‘ಆಲೀವ್ ಆಯಿಲ್’

ಆಲೀವ್ ಎಣ್ಣೆಯು ಹೆಚ್ಚು ನೈಸರ್ಗಿಕ ಪದಾರ್ಥವಾಗಿದ್ದು, ಇದನ್ನು ಶತಮಾನಗಳಿಂದಲೂ ಚರ್ಮದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ –ಆಕ್ಸಿಡೆಂಟ್ಸ್, ಪಾಲಿಫಿನಾಲ್ಸ್ ಮತ್ತು ವಿಟಮಿನ್ ಇ ಲಭ್ಯವಿದೆ. ಚಳಿಗಾಲದಲ್ಲಿ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಅತ್ಯಂತ ಸೂಕ್ತವಾದುದು.

ಆಲೀವ್ ಆಯಿಲ್+ ಜೇನುತುಪ್ಪ : ಒಂದು ಚಮಚ ಜೇನುತುಪ್ಪ ಮತ್ತು ಆಲೀವ್ ಆಯಿಲ್ ಅನ್ನು ಮಿಶ್ರಣ ಮಾಡಿ, ಮುಖದ ತ್ವಚೆಗೆ ಹಚ್ಚಿ, 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರದಲ್ಲಿ 2-3 ಬಾರಿ ಹೀಗೆ ಮಾಡಿ.

ಬಾಳೆಹಣ್ಣು + ಆಲೀವ್ ಆಯಿಲ್ : ಚೆನ್ನಾಗಿ ಪಕ್ವವಾದ ಬಾಳೆಹಣ್ಣನ್ನು ಒಂದು ಚಮಚ ಆಲೀವ್ ಆಯಿಲ್ ನೊಂದಿಗೆ ಬೆರೆಸಿ, ಈ ಪೇಸ್ಟನ್ನು ಮುಖಕ್ಕೆ ಮತ್ತು ಕತ್ತಿನ ಭಾಗಕ್ಕೆ ಲೇಪಿಸಿ, 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ವಾರಕೊಮ್ಮೆ ಹೀಗೆ ಮಾಡಿದಲ್ಲಿ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.

ಆಲೀವ್ ಆಯಿಲ್+ ಬಾದಾಮ್ ಆಯಿಲ್+ ಕಡಲೆಹಿಟ್ಟು : ಒಂದು ಚಮಚ ಆಲೀವ್ ಆಯಿಲ್, ಬಾದಾಮ್ ಆಯಿಲ್ ಮತ್ತು ½ ಚಮಚ ಕಡಲೆಹಿಟ್ಟು ಮೂರನ್ನು ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ ಮಸಾಜ್ ಮಾಡಿ, 10-15 ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕೊಮ್ಮೆ ಈ ಪ್ಯಾಕ್ ಮಾಡಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read