ವೃದ್ಧೆಯನ್ನು ಕೊಲೆಗೈದು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದ ದಂಪತಿ

ಚೆನ್ನೈ: ವೃದ್ಧೆಯನ್ನು ಬರ್ಬರವಾಗಿ ಕೊಲೆಗೈದು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆ ಎಸೆದಿರುವ ಘಟನೆ ತಮಿಳುನಾಡಿನ ಚೆನ್ನೈ ನಲ್ಲಿ ನಡೆದಿದೆ.

ಕಳೆದ ಹತ್ತು ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧೆ ಬಗ್ಗೆ ಆತಂಕಗೊಂಡ ಮಗಳು ಲೋಕನಾಯಕಿ ದೂರು ನೀಡಿದ್ದರು. ಮಹಿಳೆಯ ಮೃತದೇಹದ ಭಾಗಗಳು ಎಂಜಿಆರ್ ನಗರ ಪೊಲೀಸರಿಗೆ ನದಿಯಲ್ಲಿ ಪತ್ತೆಯಾಗಿತ್ತು.

ಕೊಲೆಯಾದ ಮಹಿಳೆಯನ್ನು ವಿಜಯಾ ಎಂದು ಗುರುತಿಸಲಾಗಿದ್ದು, ಮೈಲಾಪುರದ ಎಂಜಿಆರ್ ನಗರದಲ್ಲಿ ವಾಸವಾಗಿದ್ದರು. ವಿಜಯಾ ಮನೆಗೆ ಬಾರದಿರುವುದನ್ನು ಕಂಡು ಗಾಬರಿಗೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಕೊಲೆ ರಹಸ್ಯ ಬಯಲಾಗಿದೆ.

ಸಿಸಿಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರಿಗೆ ವಿಜಯಾ ಮನೆಯ ನೆರೆಹೊರೆಯವರಾದ ಪಾರ್ಥಿಬನ್ ಮೇಲೆ ಅನುಮಾನ ಬಂದಿದ್ದು, ಆತನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಪಾರ್ಥಿಬನ್ ಹಾಗೂ ಆತನ ಪತ್ನಿ ಕಳ್ಳತನ ಮಾಡುತ್ತಿದ್ದಾಗ ವೃದ್ಧೆ ಕೈಗೆ ಸಿಕ್ಕಿಬಿದ್ದಿದ್ದು, ಆಕೆ ವಿಷಯ ಯಾರಿಗೂ ಹೇಳಬಾರದೆಂಬ ಕಾರಣಕ್ಕೆ ವೃದ್ಧೆಯನ್ನು ಕೊಂದು ಅಡ್ಯಾರ್ ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪ್ರಕರಣ ಸಂಬಂಧ ವಿದುನಗರದ ಪಾರ್ಥಿಬನ್ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read