ಓಲಾ ಎಸ್‌ 1 ಪ್ರೋ ಮೇಲೆ ವಿಶೇಷ ರಿಯಾಯಿತಿ

ಓಲಾ ಎಲೆಕ್ಟ್ರಿಕ್ ತನ್ನ ಓಲಾ ಎಸ್‌1 ಪ್ರೋ ಸ್ಕೂಟರ್‌ ಮೇಲೆ 8,000  ರೂ. ಗಳ ವಿನಾಯಿತಿ ಕೊಟ್ಟಿದ್ದು, 1,24,999 ರೂ.ಗೆ ಮಾರಾಟ ಮಾಡುತ್ತಿದೆ. ಇದರೊಂದಿಗೆ, ತಮ್ಮ ಹಳೆಯ ಸ್ಕೂಟರ್‌ ಅನ್ನು ಅಪ್‌ಗ್ರೇಡ್‌ ಮಾಡಬಯಸುವವರಿಗೆ 2,000 ರೂ.ಗಳ ವಿನಿಮಯ ಬೋನಸ್‌ ಸಹ ಕೊಟ್ಟಿದೆ ಓಲಾ.

ಈ ಆಫರ್‌ ಏಪ್ರಿಲ್ 16 ರವರೆಗೆ ಸೀಮಿತವಿದೆ. ಹೋಮ್‌ಚಾರ್ಜರ್‌ ಘಟಕಗಳೊಂದಿಗೆ ಓಲಾ ಎಸ್‌1 ಪ್ರೋನ ಬೆಲೆಯು 1,63,549 ರೂ.ಗಳಿಂದ ಆರಂಭವಾಗುತ್ತದೆ. ಇದರೊಂದಿಗೆ ಪರ್ಫಾರ್ಮೆನ್ಸ್‌ ಮೇಲ್ದರ್ಜೆ, ನೋಂದಣಿ ಶುಲ್ಕಗಳು, ಹೆಲ್ಮೆಟ್ ಮತ್ತು ಸಬ್ಸಿಡಿಗಳು ಸೇರಿ ಸ್ಕೂಟರ್‌ನ ಬೆಲೆಯು 1,21,187 ರೂ.ಗಳಿಗೆ ಇಳಿಯುತ್ತದೆ (ಎಕ್ಸ್‌ಶೋರೂಂ ದೆಹಲಿ)

ಓಲಾದ ಫ್ಲಾಗ್‌ಶಿಪ್ ಉತ್ಪನ್ನವಾದ ಓಲಾ ಎಸ್‌1 ‌ಪ್ರೋ, 4ಕಿವ್ಯಾ ಬ್ಯಾಟರಿ ಚಾಲಿತವಾಗಿದ್ದು, ಒಂದೇ ಚಾರ್ಜ್‌ಗೆ 181 ಕಿಮೀಗಳಷ್ಟು ದೂರ ಓಡುತ್ತದೆ. ಎಸ್‌1 ಪ್ರೋನ ಅಗ್ರ ವೇಗವು 116ಕಿಮೀ/ಗಂಟೆಯಷ್ಟಿದೆ. 0-40ಕಿಮೀ 2.9 ಸೆಕೆಂಡ್‌‌ಗಳಲ್ಲಿ ತಲುಪಬಲ್ಲ ಓಲಾ, 0.60 ಕಿಮೀ/ಗಂಟೆ ವೇಗವನ್ನು 4.5 ಸೆಕೆಂಡ್‌ಗಳಲ್ಲಿ ಮುಟ್ಟಬಲ್ಲದು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read