ಬೆವರಿನ ವಾಸನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಬೆವರಿನ ವಾಸನೆ ಎಂದಾಕ್ಷಣ ಮೂಗು ಮುಚ್ಚಿಕೊಳ್ಳುವವರೇ ಎಲ್ಲ. ಆದರೆ ಬೆವರಿನಿಂದಲೇ ಸುಗಂಧ ದ್ರವ್ಯಗಳನ್ನು ತಯಾರಿಸುತ್ತಾರೆ ಎನ್ನುವುದು ನಿಮಗೆ ಗೊತ್ತೆ? ಆದರೆ ಇಲ್ಲಿ ಹೇಳುತ್ತಿರುವುದು ಸುಗಂಧ ದ್ರವ್ಯದ ವಿಷಯವಲ್ಲ, ಬದಲಿಗೆ ಕೆಲವು ಅನಾರೋಗ್ಯ ಸಮಸ್ಯೆಗಳಿಗೆ ಬೆವರಿನ ವಾಸನೆ ರಾಮಬಾಣವಾಗಿದೆ.

ಬೆವರಿನಿಂದ ಸಂಗ್ರಹಿಸಿದ ವಾಸನೆಗಳಿಗೆ ಒಡ್ಡಿಕೊಳ್ಳುವುದರಿಂದ ಕೆಲವು ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬಹುದು ಎಂದು ಅಧ್ಯಯನ ಹೇಳಿದೆ.

ಯುರೋಪಿಯನ್ ಸೈಕಿಯಾಟ್ರಿಕ್ ಅಸೋಸಿಯೇಷನ್ (ಇಪಿಎ) ನಡೆಸಿದ ಅಧ್ಯಯನದ ಪ್ರಕಾರ, ರೋಗಿಗಳು ಮಾನವ ‘ಕೀಮೋ-ಸಿಗ್ನಲ್’ಗಳಿಗೆ ಒಡ್ಡಿಕೊಂಡಾಗ ಸಾಮಾಜಿಕ ಆತಂಕ ಕಡಿಮೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಅಧ್ಯಯನವು ಸ್ವಯಂಸೇವಕರಿಂದ ಬೆವರು ಮಾದರಿಗಳನ್ನು ಸಂಗ್ರಹಿಸುವುದನ್ನು ಒಳಗೊಂಡಿರುತ್ತದೆ ಮತ್ತು ನಂತರ ರೋಗಿಗಳು ಸಾಮಾಜಿಕ ಆತಂಕದ ಚಿಕಿತ್ಸೆಯನ್ನು ಪಡೆಯುತ್ತಿರುವಾಗ ಈ ಬೆವರು ಮಾದರಿಗಳಿಂದ ಹೊರತೆಗೆಯಲಾದ ಕೀಮೋ-ಸಿಗ್ನಲ್‌ಗಳಿಗೆ ರೋಗಿಗಳನ್ನು ಒಡ್ಡಲಾಗುತ್ತದೆ.

ಸಂಶೋಧಕರು 48 ಮಹಿಳೆಯರನ್ನು (15 ರಿಂದ 35 ವರ್ಷದೊಳಗಿನವರು) ನೇಮಿಸಿಕೊಂಡಿದ್ದರು.

ಅವರೆಲ್ಲರೂ ಸಾಮಾಜಿಕ ಆತಂಕದಿಂದ ಬಳಲುತ್ತಿದ್ದರು. ಅವರ ಮೇಲೆ ಪ್ರಯೋಗ ಮಾಡಲಾಗಿದ್ದು, ಇದನ್ನು ಕಂಡುಹಿಡಿಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read