Odisha train accident: ಮೃತಪಟ್ಟವರ ಗುರುತು ಪತ್ತೆಗಾಗಿ ಶವಗಳ ಫೋಟೋ ಅಪ್ಲೋಡ್ ಮಾಡಿದ ಸರ್ಕಾರ

ನವದೆಹಲಿ : ಒಡಿಶಾದ (Odisha) ಬಾಲಸೋರ್ ಜಿಲ್ಲೆಯ ಬಾಹನಾಗದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ (Train accident) ಮೃತಪಟ್ಟವರ ಗುರುತು ಪತ್ತೆಗಾಗಿ ಶವಗಳ ಫೋಟೋ (Photo of dead bodies)ಗಳನ್ನು ಅಪ್ಲೋಡ್ ಮಾಡಲಾಗಿದೆ.

ಒಡಿಶಾ ಸರ್ಕಾರವು ರೈಲು ದುರಂತದಲ್ಲಿ ಮೃತಪಟ್ಟವರ ಗುರುತು ಪತ್ತೆಗಾಗಿ ಸರ್ಕಾರದ ವೆಬ್ ಸೈಟ್ ನಲ್ಲಿ ಮೃತಪಟ್ಟವರ ಶವಗಳನ್ನು ಅಪ್ಲೋಡ್ ಮಾಡಿದೆ. ದುರುದ್ದೇಶಕ್ಕಾಗಿ ಶವಗಳ ಫೋಟೋ ಅಪ್ಲೋಡ್ ಮಾಡದಂತೆ ಇತರರಿಗೆ ಎಚ್ಚರಿಕೆ ನೀಡಿದೆ.

ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಶವಗಳನ್ನು ಗುರುತಿಸಿ ಹಕ್ಕು ಸಾಧಿಸುವಂತೆ ಒಡಿಶಾ ಸರ್ಕಾರ ಮನವಿ ಮಾಡಿದೆ. ಈ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ಮೃತರ ಮಾಹಿತಿಯನ್ನು srcodisha.nic.in ವಿಶೇಷ ಪರಿಹಾರ ಆಯುಕ್ತರ ಅಧಿಕೃತ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ.

ವಿವಿಧ ಶವಾಗಾರಗಳಲ್ಲಿ ಇನ್ನೂ ಹಲವಾರು ಶವಗಳು ಪತ್ತೆಯಾಗಬೇಕಿದೆ. ಶವಗಳನ್ನು ಗುರುತಿಸಲು ಮತ್ತು ಹಕ್ಕು ಸಾಧಿಸಲು ವಿವಿಧ ರಾಜ್ಯಗಳ ಹತ್ತಿರದ ಸಂಬಂಧಿಕರಿಗೆ ರಾಜ್ಯ ಸರ್ಕಾರ ಮನವಿ ಮಾಡುತ್ತಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read